ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ(ರಿ) ವತಿಯಿಂದ ನವೆಂಬರ್ 1ರಂದು ವೆಜಿನೇಷನ್ ಹೋಟೆಲ್ ಕುತ್ತಾರಿನಲ್ಲಿ ದಿ.ಮನೋಹರ ಪ್ರಸಾದ್ ಸಂಸ್ಮರಣೆ, ಕನ್ನಡ ರಾಜ್ಯೋತ್ಸವ, ಗೌರವ ಸನ್ಮಾನ ಕಾರ್ಯಕ್ರಮ ನಡೆಯಲ್ಪಟ್ಟಿತ್ತು.

ದಿ.ಮನೋಹರ ಪ್ರಸಾದ್‍ರವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅವರ ಸಾಧನೆಯನ್ನು ಉಲ್ಲೇಖಿಸಿದ ಮಂಗಳೂರು ಪ್ರೆಸ್ ಕ್ಲಬ್‍ನ ಅಧ್ಯಕ್ಷರಾದ ಪಿ.ಬಿ.ಹರೀಶ್ ರೈಯವರು ದಿ.ಮನೋಹರ ಪ್ರಸಾದ್‍ರವರು ಒಬ್ಬ ಖ್ಯಾತ ಪತ್ರಕರ್ತ, ಶ್ರೇಷ್ಠ ಸಾಹಿತಿ, ಭಾಷಾ ತಜ್ಞ, ನಮ್ಮ ಊರಿನ ಸಂಸ್ಕೃತಿಯನ್ನು ಜಗತ್ತಿಗೆ ತೋರಿಸಿಕೊಟ್ಟ ಕನ್ನಡದ ಎಕೈಕ ಸಾಧಕ ಎಂದು ತಿಳಿಸಿದರು.  

ಈ ಸಂದರ್ಭದಲ್ಲಿ ಕಾರ್ಯಕ್ರಮ ಉದ್ಫಾಟಿಸಿದ ರಾಜೇಶ್ ಜಿ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದ.ಕ ಇವರು ಮಾತನಾಡಿ ಕಲೆ, ಸಾಹಿತ್ಯ, ಸಂಗೀತ ಹಾಗೂ ಸಂಸ್ಕೃತಿಯ ತವರೂರಾದ ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಮತ್ತು ನಾಡನ್ನು ಉಳಿಸುವ ಕಾರ್ಯಕ್ರಮ ಹೆಚ್ಚೆಚ್ಚು ನಡೆಯಲಿ ಹಾಗೂ ಇಂತಹ ಅಭೂತಪೂರ್ವ ಕಾರ್ಯಕ್ರಮ ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ನಡೆಸಿದ್ದಕ್ಕೆ ಶ್ಲಾಫಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಮಾಜಿ ಶಾಸಕರಾದ ಹಾಗೂ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಸ್ವಾಗಾತಾಧ್ಯಕ್ಷರಾದ ಕೆ.ಜಯರಾಮ ಶೆಟ್ಟಿಯವರು ಕಳೆದ 27ವರ್ಷಗಳಿಂದ ಅಬ್ಬಕ್ಕ ಉತ್ಸವ ಸಮಿತಿಯು ನಿರಂತರವಾಗಿ ಅಬ್ಬಕ್ಕಳ ಬಗ್ಗೆ  ಹಾಗೂ ದೇಶದ, ರಾಜ್ಯದ ಭಾಷೆ, ಕಲೆ ಹಾಗೂ ಸಂಸ್ಕೃತಿಯನ್ನು ಬೆಳೆಸುವಲ್ಲಿ ಮಹತ್ವಪೂರ್ಣ ಸಂಘಸಂಸ್ಥೆಯಾಗಿದೆ ಎಂದು ತಿಳಿಸಿದರು.

ಗೌರವ ಸನ್ಮಾನ: 

ಖ್ಯಾತ ಪತ್ರಕರ್ತರು ಹಾಗೂ ಸಾಹಿತಿಗಳಾದ ಸನ್ಮಾನ್ಯ ಮಲಾರ್ ಜಯರಾಮ ರೈ, ಖ್ಯಾತ ದೃಶ್ಯಗ್ರಾಹಕರಾದ ಸನ್ಮಾನ್ಯ  ಜಯಂತ್ ಉಳ್ಳಾಲ್, ಖ್ಯಾತ ಛಾಯಾಗ್ರಾಹಕರಾದ ಸನ್ಮಾನ್ಯ  ಜಾನ್ ಡಿಸೋಜಾ ಇವರನ್ನು ಸನ್ಮಾನಿಸಲಾಯಿತು. ಇವರ ಪರಿಚಯವನ್ನು ಅನುಪಮ ಜೆ, ಕೆ.ಎಂ.ಕೆ.ಮಂಜನಾಡಿ, ಶಶಿಕಾಂತಿ ಉಳ್ಳಾಲ್ ಇವರು ವಾಚಿಸಿದರು.  

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ)ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷರಾದ  ವಸಂತ ಕೊಣಾಜೆ ಎನ್, ಸೌತ್ ಕೆನರಾ ಪೋಟೋಗ್ರಾಫರ್ಸ್ ಎಸೋಸಿಯೇಶನ್ ಉಳ್ಳಾಲ ವಲಯದ ಉಪಾಧ್ಯಕ್ಷರಾದ ರಾಜೇಶ್ ತೊಕ್ಕೊಟ್ಟು, ಗಣ್ಯ ಅತಿಥಿಗಳಾಗಿ ಸಮಿತಿಯ ಗೌರವ ಉಪಾಧ್ಯಕ್ಷರುಗಳಾದ ಸದಾನಂದ ಬಂಗೇರ , ಹೈದರ್ ಪರ್ತಿಪ್ಪಾಡಿ, ಅಬ್ಬಕ್ಕ ಸಮಿತಿಯ ಉಪಾಧ್ಯಕ್ಷರಾದ ಯು.ಪಿ.ಆಲಿಯಬ್ಬ,  ದೇವಕಿ ಉಳ್ಳಾಲ್ ಹಾಗೂ ಸಮಿತಿಯ ಪದಾಧಿಕಾರಿಗಳಾದ ಸತೀಶ್ ಭಂಡಾರಿ, ಚಿದಾನಂದ, ರತ್ನಾವತಿ ಜೆ ಬೈಕಾಡಿ, ಶಶಿಕಲಾ ಗಟ್ಟಿ, ಹೇಮಾ ಕಾಪಿಕಾಡು, ಸರೋಜ ಕುಮಾರಿ, ಕ್ಲೇರಾ ಕುವೆಲ್ಲೊ, ವಾಣಿ ಲೋಕಯ್ಯ, ಮಾಧವಿ ಉಳ್ಳಾಲ್, ಸತ್ಯವತಿ ಜೆ.ಕೆ, ಮಲ್ಲಿಕಾ ಉಳ್ಳಾಲ್‍ಬೈಲು, ಸ್ವಪ್ನಾ ಶೆಟ್ಟಿ, ಶೋಭಾ, ಚಿತ್ರ ಜಗನ್, ನಾಗರತ್ನ ಮುಂತಾದವರು ಉಪಸ್ಥಿತರಿದ್ದರು. 

ಅಬ್ಬಕ್ಕ ಉತ್ಸವ ಸಮಿತಿಯ ಅಧ್ಯಕ್ಷರಾದ ದಿನಕರ ಉಳ್ಳಾಲ್ ಸ್ವಾಗತಿಸಿ ಪ್ರಸ್ತಾವಿಸಿದರು.  ಸಮಿತಿಯ ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪದಾಧಿಕಾರಿಗಳಾದ ಮಲ್ಲಿಕಾ ಭಂಡಾರಿ ವಂದಿಸಿದರು.