ನಮ್ಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಪ್ರಸಿದ್ಧ ದೇವಾಲಯಗಳು, ಮಂದಿರಗಳು, ದೈವಸ್ಥಾನಗಳ ವಾರ್ಷಿಕ ಜಾತ್ರೆ ಬ್ರಹ್ಮಕಲಶ ಮುಂತಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾರ್ವಜನಿಕ ಅನ್ನಸಂತರ್ಪಣೆಯ ಪಾಕ ತಯಾರಿಸುವ ಖ್ಯಾತ ಬಾಣಸಿಗ ವಿಜಯಕುಮಾರ್ ಭಟ್ ಅದ್ಯಪಾಡಿಯವರು ಅಲ್ಪ ಕಾಲದ ಅನಾರೋಗ್ಯದ ಕಾರಣ ತನ್ನ 61ನೆಯ ವರ್ಷದಲ್ಲಿ ನಿಧನರಾದರು. 

ಮೃತರು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಯಾವುದೇ ಪ್ರಚಾರ ಬಯಸದೆ ಉದಾರ ಸಹಕಾರವನ್ನು ನೀಡುತ್ತಿದ್ದು ಇವರ ಆಗಲುವಿಕೆಯಿಂದ ಒಬ್ಬ ಅನುಭವಿ ಪಾಕ ತಜ್ಞನನ್ನು ಕಳೆದುಕೊಂಡಂತಾಗಿದೆ.  ಮೃತರು ಪತ್ನಿ ,ಇಬ್ಬರು ಪುತ್ರರು, ಓರ್ವ ಪುತ್ರಿ. ಐವರು ಸಹೋದರರು,ಓರ್ವ ಸಹೋದರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಭಾಜಪದ ರಾಜ್ಯ ಅಧ್ಯಕ್ಷರು ಸಂಸದ ರಾದ ನಳಿನ್ ಕುಮಾರ್ ಕಟೀಲು,ಶಾಸಕರಾದ ಡಾ.ಭರತ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್ತಿನ ಪ್ರಮುಖರಾದ ಕೃಷ್ಣಮೂರ್ತಿ, ಗೋಪಾಲ ಕುತ್ತಾರ್, ಹೆಚ್. ಕೆ. ಪುರುಷೋತ್ತಮ್, ಮನೋಹರ್ ಸುವರ್ಣ, ಭುಜಂಗ ಕುಲಾಲ್ ,ಕಾರ್ತಿಕ್ ಮತ್ತು ಧಾರ್ಮಿಕ ಮುಂದಾಳು ಶೆಡ್ಡೆ ಮಂಜುನಾಥ್ ಭಂಡಾರಿ ಸೇರಿದಂತೆ ಸಹಸ್ರಾರು ಮಂದಿ ಮೃತರ ಅಂತಿಮ ದರ್ಶನ ಪಡೆದರು.