ಮಂಗಳೂರು, ಏಪ್ರಿಲ್, 16 ಏಪ್ರಿಲ್: ಇಲ್ಲಿನ ಸ್ವರೂಪ ಸಂಸ್ಥೆಯ ಮುಖ್ಯಸ್ಥ ರಾದ ಗೋಪಾಡ್ಕರ್ ಅವರು ಒಂದು ವಿಶಿಷ್ಟ ವಾದ ಕ್ರಿಯಾಶೀಲ ತರಬೇತು ಶಿಬಿರವು ಗೋಪಾಡ್ಕರ್ ಮತ್ತು ಸುಮಾಡ್ಕರ್ ಸಾರಥ್ಯದಲ್ಲಿ ಏಪ್ರಿಲ್ 16 ರ ಮುಂಜಾನೆ ಮೊದಲ್ಗೊಂಡು ದಿನ ಪೂರ್ತಿ ನಡೆಯಿತು. ಹಿರಿಯ ಸಾಹಿತಿ ವೈದ್ಯ ಡಾ ಸುರೇಶ ನೆಗಳಗುಳಿಯವರು ಕಾರ್ಯಕ್ರಮ ದೀಪ ಬೆಳಗಿಸಿ ಉದ್ಘಾಟಿಸಿದರು.
ಪ್ರಾಸ್ತಾವಿಕ ಹಾಗೂ ಸ್ವಾಗತ ನುಡಿಗಳನ್ನು ಪಿಂಗಾರ ಸಾಹಿತ್ಯ ಬಳಗ ಹಾಗೂ ಪತ್ರಿಕೆಯ ಮುಖ್ಯಸ್ಥ ರೇಮಂಡ್ ಡಿಕೂನ ತಾಕೊಡೆ ಅವರು ನೆರವೇರಿಸಿದರು.
ಸ್ವರೂಪ ಅವರ ಅದ್ವಿತೀಯ ಜ್ಞಾನ ಸಂಪತ್ತಿನ ಅನಾವರಣವಾದ ಪ್ರಾತ್ಯಕ್ಷಿಕೆಯ ಬಳಿಕ ಗೋಪಾಡ್ಕರ್ ರವರು ಮತ್ತು ಸುಮಾಡ್ಕರ್ ರವರು ಹೊಸ ಚಿಕಿತ್ಸಕ ಬರಹಗಳು ಪಾಸಿಟಿವ್ ಸಾಹಿತ್ಯ ಯಾಕಾಗಲ್ಲ" ಎಂಬ ವಿಚಾರದ ಬಗ್ಗೆ ಸವಿವರವಾದ ವ್ಯಾಖ್ಯಾನ ಹಾಗೂ ಸಂವಾದಗಳನ್ನು ನಡೆಸಿದರಲ್ಲದೆ ಮುಂದಿನ ರಾಷ್ಟ್ರೀಯ ಯೋಜನೆಗಳ ಪಕ್ಷಿನೋಟ ಬೀರಿದರು.
ಅಸೀಫ್ ರವರ ಧನ್ಯವಾದ ಸಮರ್ಪಣೆ ಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
ಧನಾತ್ಮಕ ದೃಷ್ಟಿಕೋನದ ಮೇಲೆ ಬೆಳಕು ಚೆಲ್ಲುವ ಹಲವಾರು ಹಿರಿಯ ಸಾಹಿತಿ ಹಾಗೂ ಬರಹಗಾರ ಆಸಕ್ತ ಶಿಬಿರಾರ್ಥಿಗಳು ಈ ಕಾರ್ಯಕ್ರಮ ವನ್ನು ದಿನವಿಡೀ ಆಸ್ವಾದಿಸಿದರು.