ಖಿನ್ನತೆ ಅಥವಾ Depression ಇದು ಆಧುನಿಕ ಕಾಲದ ಪ್ರಖ್ಯಾತ ಮಾನಸಿಕ ರೋಗ. ಬದುಕೆಂಬುದು ಹೋಪ್ ಲೆಸ್ಸು ಇದಕ್ಕೆ ಪರಿಹಾರವಿಲ್ಲ ಇಲ್ಲಿ ಯಾವುದೊ ಪ್ರಧಾನವೂ ಅಲ್ಲ ಎಂಬ ಭಾವನೆಯೇ ಖಿನ್ನತೆ.ಜೀವನದಲ್ಲಿ ಭವಿಷ್ಯದ ಬಗ್ಗೆ ಧನಾತ್ಮಕವಾಗಿ ಚಿಂತಿಸದಿರುವ ಆ ಒಂದು ಕ್ಷಣವನ್ನು ನಾವೆಲ್ಲರೂ ಎದುರಿಸುತ್ತೇವೆ.ಒಂದು ಕಠಿಣ ಪರಿಸ್ಥಿತಿಯಿಂದ ಹೊರಬರುವ ದಾರಿ ನಿಮಗೆ ಆ ಸಂದರ್ಭದಲ್ಲಿ ಕಾಣದೇ ಹೋಗುತ್ತದೆ ಮತ್ತು ಸುತ್ತಲೂ ಸೂರ್ಯಕಾಂತಿಯ ಬದಲು ಕರಿಮೋಡಗಳಷ್ಟೇ ಕಣ್ಣಿಗೆ ಬೀಳುತ್ತದೆ.

ನಿಮ್ಮ ಮೂಡ್ ಗಳನ್ನು ನೀವೇ ನಿಯಂತ್ರಿಸಬಲ್ಲಿರೆಂದು ನಿಮಗೆ ಗೊತ್ತೇ? ಎಲ್ಲಾದಕ್ಕೂ ಮನಸ್ಸೇ ಕಾರಣ ಉದಾಹರಣೆಗೆ ಒಬ್ಬ ವ್ಯಕ್ತಿ ಎಂದರೆ ನಿಮಗೆ ತುಂಬಾ ಇಷ್ಟ ಅವರೊಡನೆ ಸದಾಕಾಲವೂ ಮಾತಾಡಲಿಕ್ಕೆ ಬಯಸುತ್ತೀರಿ ಏಕೆಂದರೆ ಅವರ ನಿಮ್ಮನ್ನ ತುಂಬಾ ಪ್ರೀತಿಸುತ್ತಾರೆ. ಮುಂದಿನ ದಿನ ಅವರು ನಿಮ್ಮನ್ನ ತಾತ್ಸಾರ ಮಾಡಿ ನಿಮ್ಮೊಡನೆ ಜಗಳ ಮಾಡಿದರೆ ನೀವು ಅವರನ್ನ ದ್ವೇಷಿಸಲು ಪ್ರಾರಂಭಿಸುತ್ತೀರೀ.

ನಾವು ಬಯಸಿದ್ದ ಎಲ್ಲಾವೂ ಸಿಗಬೇಕು ನಾವು ಅಂದುಕೊಂಡ ಹಾಗೆ ಆಗಬೇಕು ಎನ್ನುವ ಧೋರಣೆಗಳು ಸರಿ ಅಲ್ಲ. ಕೆಲವರು ಸಣ್ಣ ಸೋಲ ಆದರೂ ಸಣ್ಣ ಅವಮಾನ ಆದರೂ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಾರೆ. ಖಿನ್ನತೆಯ ಮೂಲ ಕಾರಣಗಳು ಅತೀಯಾದ ಕೋಪ, ನಮ್ಮ ಅತೀಯಾದ ನೀರೀಕ್ಷೆ ,ನಾವು ಅಂದುಕೊಂಡಿದ್ದೇ ಆಗಬೇಕು ಅನ್ನುವ ಹಠ ,ನಕರಾತ್ಮಕ ಚಿಂತನೆಗಳು ನಿರಾಶೆಯ ಭಾವ 

ಇಂದಿನ ಪೀಳಿಗೆಯವರ ತಂದೆತಾಯಿಗಳು ಮಕ್ಕಳನ್ನ ಬೆಳಸೋದು ಹಾಗೆ ಇದೆ ಅವರಿಗೆ ಚಿಕ್ಕ ವಯಸ್ಸಿನಿಂದಲೂ ಹೊಡೆಯದೇ ಬೈಗುಳ ನೀಡದೇ ಅವರು ಕೇಳದನ್ನೆಲ್ಲಾ ನೀಡುತ್ತಾರೆ. ಎಲ್ಲಾರಿಗೂ ಭಗವದ್ಗೀತೆ ರಾಮಾಯಣ ಓದಲು ಪ್ರೇರೆಪಿಸಬೇಕು. ಸಾಮಾಜಿಕ ಜಾಲತಾಣಗಳ ಬಳಕೆ ಕಡಿಮೆ ಮಾಡಿ ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಬೇಕು.ಒಂಟಿತನದ ಭಾವನೆಯನ್ನು ಹೋಗಲಾಡಿಸಿ ಜನರೊಂದಿಗೆ ಬೆರೆಯಿರಿ

ಜೀವನದಲ್ಲಿ ಒಂದು ಶಿಸ್ತನ್ನು ರೂಢಿಸಿಕೊಳ್ಳಿ ಅವ್ಯವಸ್ಥೆಗಳಿಂದಲೇ ತುಂಬಿಹೋದ ಜೀವನದಿಂದ ಖಿನ್ನತೆ ಮತ್ತಷ್ಟು ಬೆಳೆಯುತ್ತದೆ.ದಿನವೂ ಯೋಗ ಧ್ಯಾನ ಪ್ರಾರ್ಥನೆಗಳಲ್ಲಿ ನಿಮ್ಮನ್ನ ತೊಡಗಿಸಿಕೊಳ್ಳಿ,ನಿಮ್ಮ ಅಗತ್ಯ ಗಳು ಮಿತವಾಗಿರಲಿ,ಪರರಿಂದ ಏನನ್ನು ನಿರೀಕ್ಷಿಸಬೇಡಿ, ನಕರಾತ್ಮಕ ಭಾವನೆಗಳನ್ನು ಸಕರಾತ್ಮಕವಾಗಿ ಪರಿವರ್ತಿಸಿ, ವರ್ತಮಾನಕ್ಕೇ ಮಹತ್ವ ನೀಡಿ,ಜೀವನದ ವಾಸ್ತವವನ್ನು ಒಪ್ಪಿಕೊಂಡು ಹೊಂದಿಕೊಳ್ಳಿ,ಉತ್ತಮ ಹವ್ಯಾಸಗಳನ್ನ ರೂಢಿಸಿಕೊಳ್ಳಿ, ಯಾವಾಗಲೂ ಒಂದಲ್ಲಾ ಒಂದು ಕೆಲಸದಲ್ಲಿ ನಿರತರಾಗಿರಿ,ಆರೋಗ್ಯಕರ ಜೀವನಶೈಲಿಗಳನ್ನು ಅಳವಡಿಕೊಳ್ಳಿ.ಕೆಲಸವನ್ನು ಬದುಕನ್ನು ಪ್ರೀತಿಸಿ ಸಂತೃಪ್ತಿ ಆನಂದವನ್ನು ಕಂಡುಕೊಳ್ಳಿ.


-By ರೇಷ್ಮಾ ಶೆಟ್ಟಿ