ಮಂಗಳೂರು, ಮೇ 17: ಮೇ 19 ರ ಗುರುವಾರ ಮಂಗಳೂರು ಪುರಭವನದಲ್ಲಿ ವಿಧಾನ ಪರಿಷತ್‌ನಲ್ಲಿ ಪ್ರತಿ ಪಕ್ಷ ನಾಯಕರಾದ ಬಿ.ಕೆ.ಹರಿಪ್ರಸಾದ್ ಮತ್ತು ವಿಧಾನ ಸಭೆಯಲ್ಲಿ ಪ್ರತಿ ಪಕ್ಷ ಉಪ ನಾಯಕರಾದ ಯು. ಟಿ. ಖಾದರ್ ಅವರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ ಎಂದು ಮಾಜೀ ಮೇಯರ್ ಮತ್ತು ಅಭಿನಂದನಾ ಸಮಿತಿಯ ಸಂಚಾಲಕರಾದ ಶಶಿಧರ ಹೆಗ್ಡೆ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ ಮೂಲದ ಹರಿಪ್ರಸಾದ್ ಅವರು ಕಾಂಗ್ರೆಸ್‌ನ ಸೇವಾದಳ ಮತ್ತು ಯುವ ಕಾಂಗ್ರೆಸ್‌ ಮೂಲಕ ಕಾಂಗ್ರೆಸ್‌ನಲ್ಲಿ ಉತ್ತುಂಗಕ್ಕೆ ಬೆಳೆದವರು ಜನಪ್ರತಿನಿಧಿ ಸಭೆಯಲ್ಲಿ ಸತ್ಯವನ್ನು ಗಟ್ಟಿಯಾಗಿ ಹೇಳುವವರು ಹರಿಪ್ರಸಾದ್ ಎಂದು ಹೆಗ್ಡೆ ತಿಳಿಸಿದರು. ಡಿಕೆ ಶಿವಕುಮಾರ್, ಸಲೀಂ ಅಹ್ಮದ್, ಹನುಮಂತಯ್ಯ ಮೊದಲಾದವರು ಭಾಗವಹಿಸುವರು ಎಂದು ತಿಳಿಸಿದರು.

ಯು. ಟಿ. ಖಾದರ್ ನಾಲ್ಕು ಅವಧಿಗೆ ಶಾಸಕರಾಗಿ ಜನಪರ ಕೆಲಸ ಮಾಡಿದವರು.

ಪತ್ರಿಕಾಗೋಷ್ಠಿಯಲ್ಲಿ ನವೀನ್ ಡಿಸೋಜಾ, ಸಾಹುಲ್ ಹಮೀದ್, ಟಿ. ಕೆ. ಸುಧೀರ್, ಶುಭೋದಯ ಆಳ್ವ ಶಬ್ಬೀರ್ ಮೊದಲಾದವರು ಉಪಸ್ಥಿತರಿದ್ದರು.