ಗುರು ಬ್ರಹ್ಮ ಗುರುವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷತ್ ಪರಬ್ರಹ್ಮ ತಸ್ಮಶ್ರೀ ಗುರುವೇ ನಮಃ” ಹಿಂದಿನ ಕಾಲದಲ್ಲಿ ಇಂತಹ ಶ್ಲೋಕಗಳನ್ನು ಹಾಡಿ ಹೊಗಳುತ್ತಾ ಗುರುಗಳಿಗೆ ಮಹತ್ವ ಪೂರ್ಣ ಸ್ಥಾನ ಕೊಟ್ಟಿದ್ದಾರೆ. ಈ ವಿದ್ಯಾರ್ಥಿಗಳ ಬಾಳ ಹೊಂಬೆಳಕು ಶಿಕ್ಷಕರು” ಎಂದರೆ ತಪ್ಪಾಗಲಾರದು. ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯ ಹಿಂದೆ ಶಿಕ್ಷಕರ ಪಾತ್ರ ತುಂಬಾ ಮಹತ್ವದ್ದಾಗಿದೆ. ತಾಯಿ ಜೀವ ನೀಡಿದರೆ ಶಿಕ್ಷಕರು ಜೀವನವನ್ನೇ ನೀಡುತ್ತಾರೆ” ಎಂಬ ಮಾತು ಅಕ್ಷರಶಃ ಸತ್ಯ, ಶಿಕ್ಷಕರು ವಿದ್ಯಾರ್ಥಿಗಳನ್ನು ನದಿ ದಾಟಿಸುವ ನಾಯಕರೂ ಹೌದು. ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಬಗ್ಗೆ ದಾರಿದೀಪವಾಗುವವರೂ ಹೌದು.
ಬಾಲ್ಯದಲ್ಲಿದಾಗ ವಿದ್ಯಾರ್ಥಿಗಳ ಕೈ ಹಿಡಿದು ನವಣಕ್ಕಿಯಲ್ಲಿ ಬರೆಸಿದವರು ಶಿಕ್ಷಕರು. ಅಕ್ಷರ ಅಭ್ಯಾಸವ ಮೂಡಿಸಿ, ಸಣ್ಣ ಪುಟ್ಟ ಮಕ್ಕಳ ತುಂತಾಟ, ಕೀಟಲೆಗಳನ್ನೆಲ್ಲವ ಸಹಿಸಿಕೊಂಡು, ಸಣ್ಣ ಪುಟ್ಟ ತಪ್ಪುಗಳನ್ನು ತಿದ್ದಿಕೊಂಡು, ವಿದ್ಯಾರ್ಥಿಗಳಿಗೆ ಬದುಕಿನ ಪಾಠಗಳನ್ನು ಸಣ್ಣ ಕಥೆಗಳ ರೂಪದಲ್ಲಿ ವಿವರಿಸುವ ನಿಸ್ವಾರ್ಥ ಮಾರ್ಗದರ್ಶಕರು ಶಿಕ್ಷಕರು, ಸರಿ ತಪ್ಪುಗಳ ಬಗ್ಗೆ ಅರ್ಥಪೂರ್ಣವಾಗಿ ತಿಳಿಸಿ ಬುದ್ದಿ ಹೇಳುವವರು ಶಿಕ್ಷಕರು. 'ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಪರಿಪರಿ ಅನೇಕ ಶಾಸ್ತ್ರವನ್ನೋದಿ ವ್ಯರ್ಥವಾಯಿತು ಭಕುತಿ' ಎಂದು ದಾಸ ಶ್ರೇಷ್ಠರಾದ ಪುರಂದರದಾಸರು ಹಾಡಿದ್ದಾರೆ. ಗುರುವಿನ ಸಹಾಯವಿಲ್ಲದೆ ತಾನು ಒಬ್ಬಂಟಿಯಾಗಿ ಸಾಧಿಸುತ್ತೇನೆ ಎಂಬುದು ಸುಳ್ಳು.
ಆಕಾರದಲ್ಲಿ ಯಾವುದಾದರೂ ಒಂದು ತೊಡಕು ಇದ್ದೇ ಇರುತ್ತದೆ. ಗುರುವಿನಲ್ಲಿಗೆ ಶರಣುಹೊಗಿ ಅವನ ಮಾರ್ಗದರ್ಶನದಂತೆ ನಡೆದರೆ ಯಶಸ್ಸು ನಿಶ್ಚಿತವಾದದ್ದು. ವಿದ್ಯೆಯು ಒಬ್ಬ ಮನುಷ್ಯನ ಬಾಲ್ಯದಿಂದ ಅವನ ವೃದ್ದಾಪ್ಯದವರಿಗೆ ಬಹಳ ವಿಕಾಸವನ್ನು ಹೊಂದುತ್ತದೆ. ನಾವು ನಮ್ಮ ಜೀವನದಲ್ಲಿ ತಂದೆ, ತಾಯಿ, ದೇವರಿಗೆ ನಿಡುವ ಸ್ಥಾನಮಾನ, ಗೌರವವನ್ನು ಗುರುವಿಗೂ ನೀಡುತ್ತೇವೆ, ನೀಡಬೇಕು ಕೂಡ, ಗುರುವು ತಂದೆಯಂತೆ ಪ್ರೋತ್ಸಾಹವನ್ನು, ತಾಯಿಯಂಂತೆ ಪ್ರೀತಿಯನ್ನೂ, ಗೆಳೆಯನಂತೆ ಸ್ನೇಹವನ್ನು ನೀಡುತ್ತಾನೆ. ಅಷ್ಟೇ ಅಲ್ಲದೆ ನಮ್ಮ ಜೀವನದಲ್ಲಿ ನಿರ್ದೇಶಕನ ಪ್ರಾತ್ರವನ್ನು ನಿರ್ವಹಿಸುತ್ತಾನೆ. ಹೇಗೆ ಶಿಲ್ಪಯಾದವ ಗಂಧದ ಕೊರಡನ್ನು ತಿದ್ದಿ ತೀಡಿ ಸುಂದರ ಮೂರ್ತಿಯನ್ನು ನಿರ್ಮಿಸುತ್ತಾನೋ ಹಾಗೆಯೇ ಗುರುವು ತನ್ನ ಜ್ಞಾನವನ್ನು ನಿಷ್ಕಲ್ಮಶ ನಿಸ್ವಾರ್ಥ ಭಾವದಿಂದ ವಿದ್ಯಾರ್ಥಿಯ ಮೇಲೆ ಧಾರೆ ಎರೆದು ಉತ್ತಮ ನಾಗರಿಕನನ್ನು ಸೃಷ್ಟಿಸುತ್ತಾನೆ.
ಗುರುವೆಂಬುದು ಅಜ್ಞಾನದ ಕತ್ತಲಿನಿಂದ ಜ್ಞಾನದ ಬೆಳಕಿನಡೆಗೆ ಕರೆದೊಯ್ಯುವ ಶಕ್ತಿ. ಗುರುವೇ ಎಲ್ಲಾ ವಿದ್ಯೆಗಳಿಗೂ ಆಧಾರ. ವಿದ್ಯೆ ಕಲಿಸಿದ ಗುರುಗಳನ್ನು ಎಂದೆಂದಿಗೂ ಮರೆಯದೆ ಭಕ್ತಿಯಿಂದ ಸೇವಿಸುವುದು ನಮ್ಮೆಲ್ಲರ ಕರ್ತವ್ಯ. ಗುರುವಿನಿಂದಾದ ಬೋಧನೆಯನ್ನು ಅಭ್ಯಸಿಸದಿದ್ದರೆ ವಿದ್ಯೆಯೇ ವಿಷವಾಗಬುದು. ಆದ್ದರಿಂದ ಗುರುವಿನಲ್ಲಿನ ಅಚಲವಾದ ಶ್ರದ್ದೆಯೇ ಆತ್ಮಸಾಕ್ಷಾತ್ಕಾರಕ್ಕೆ ದಾರಿ ಇಂದಿನ ಕಾಲಮಾನದಲ್ಲಿ ಶಿಕ್ಷಣ ವ್ಯವಸ್ಥೆ ವ್ಯಾಪಾರಿಕರಣಗೊಂಡು ವಿದ್ಯಾಸಂಸ್ಥೆಗಳ ನಡುವೆ ತೀರ್ವ ಪೈಪೋಟಿ ಕಾಣಸಿಗುತ್ತದೆ. ಆದರೂ ಗುರುವಿನ ಸ್ಥಾನ, ಮಹತ್ವ ಅಚಲ.
Article By
ನಮಿತಾ ಜೊವಿಟ ಮಾರ್ಟಿಸ್
ಬಿ. ಎಡ್ ವಿದ್ಯಾರ್ಥಿ ಸಂತ ಅಲೋಶಿಯಸ್ ಕಾಲೇಜು ಮಂಗಳೂರು