ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ: ಇಲ್ಲಿಗೆ ಸಮೀಪದ ಬೆಳುವಾಯಿ ವಲಯ ಮಟ್ಟದ ಪೋಶಣ್ ಮಾಸ ಕಾರ್ಯಕ್ರಮ ಬೆಳುವಾಯಿ ಪಂಚಾಯತ್ ಸಭಾಂಗಣದಲ್ಲಿ ಸಪ್ಟೆಂಬರ್ 12ರಂದು ನಡೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಳುವಾಯಿ ಗ್ರಾಮ ಪಂಚಾಯತ್, ಬೆಳುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರ ಇವುಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಿತು. 

ಪ್ರತಿಯೊಬ್ಬರೂ ಜಂಕ್ ಫುಡ್ ಗಳನ್ನು ಕೆಜಿಸಿ ಮನೆಯಲ್ಲೇ ಮಾಡಿದ ಪೌಷ್ಟಿಕಾಂಶ ಯುಕ್ತ ಆಹಾರದ ಉಪಯೋಗಗಳ ಬಗ್ಗೆ ಮಕ್ಕಳು ಮತ್ತು ಮಹಿಳೆಯರ ಇಲಾಖೆಯ ವಲಯ ಮೇಲ್ವಿಚಾರಕಿ ರತಿ ಶೆಟ್ಟಿ ತಿಳಿಹೇಳಿದರು. ಪಂಚಾಯತ್ ಅಧ್ಯಕ್ಷರಾದ ಸುರೇಶ್ ಪೂಜಾರಿ, ಉಪಾಧ್ಯಕ್ಷೆ ಜಯಂತಿ, ಆರೋಗ್ಯ ಅಧಿಕಾರಿ ಆಶಾ ರಾಣಿ, ಸ್ತ್ರೀಶಕ್ತಿ ಗೊಂಚಲು ಸಮಿತಿಯ ಕಾರ್ಯದರ್ಶಿ ಅಸ್ಮಾ ಪರ್ವೀನ್ ವೇದಿಕೆಯಲ್ಲಿ ಹಾಜರಿದ್ದರು. 

ಪಂಚಾಯತ್ ಸಿಬ್ಬಂದಿಗಳು, ವಲಯದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಗುಂಪಿನ ಎಲ್ಲ ಸದಸ್ಯರುಗಳು ಹಾಜರಿದ್ದರು. ಸ್ತ್ರೀಶಕ್ತಿ ಸದಸ್ಯರು ತಂದ ಪೌಷ್ಟಿಕಾಂಶಯುಕ್ತ ಆಹಾರವನ್ನು ಅವಲೋಕಿಸಿ ಉತ್ತಮ ಆಹಾರ ತಯಾರಿಸಿದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಅಂಗನವಾಡಿ ಕಾರ್ಯಕರ್ತೆ ಜಯಂತಿ ಸ್ವಾಗತಿಸಿದರು. ಶಿಕ್ಷಕಿ ಸುಜಯ ಕುಮಾರಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.