ಮಂಗಳೂರು, ಸೆ. 07: ರಾಹುಲ್ ಗಾಂಧಿಯವರು ಕಳೆದ ವರುಷ ನಡೆಸಿದ ಪ್ರೀತಿ ಹಂಚಿದ ಭಾರತ್ ಜೋಡೋ ವಾರ್ಷಿಕೋತ್ಸವವನ್ನು ಮಂಗಳೂರಿನಲ್ಲಿ ಕಾಂಗ್ರೆಸ್ಸಿಗರು ಹುಮ್ಮಸ್ಸಿನಿಂದ ಆಚರಿಸಿದರು.

ಮಂಗಳೂರು ಹಂಪನಕಟ್ಟೆಯ ಮಿಲಾಗ್ರೀಸ್ ಇಗರ್ಜಿಯ ಎದುರು ನೆನಪಿನ ಪಾದಯಾತ್ರೆ ನಡೆಯಿತು. ಅದು ಮಂಗಳೂರು ಪುರಭವನದ ಗಾಂಧೀಜಿಯವರ ಪ್ರತಿಮೆ ಎದುರು ಸಮಾರೋಪ ಕಂಡಿತು.

ಐವಾನ್ ಡಿಸೋಜ ಅವರು ಮಾತನಾಡಿ ಕನ್ಯಾಕುಮಾರಿಯಿಂದ ಜಮ್ಮು ಕಾಶ್ಮೀರದವರೆಗೆ ಜೋಡೋ ಭಾರತ ಯಾತ್ರೆ ನಡೆಸಿದ ರಾಹುಲ್ ಗಾಂಧಿಯವರು ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಗೆದ್ದು ಬರುವಂತೆ ಮಾಡಿದರು ಎಂದು ಹೇಳಿದರು.

ಯಾತ್ರೆಯು ಎ. ಬಿ. ಶೆಟ್ಟಿ ವೃತ್ತವನ್ನು ಸುತ್ತುವರಿದು ಗಾಂಧೀಜಿ ಮೂರ್ತಿ ತಲುಪಿ ಪುರಭವನದೆದುರು ಸಂಪನ್ನಗೊಂಡಿತು.

ರಮಾನಾಥ ರೈ ಅವರು ಕೂಡ ಮಾತನಾಡಿ ಭಾರತ ಜೋಡೋ ಯಾತ್ರೆ ಒಂದು ಐತಿಹಾಸಿಕ ಘಟನೆ. ಇದಕ್ಕೆ ಸ್ವಾತಂತ್ರ್ಯ ಹೋರಾಟದಷ್ಟೆ ಮಹತ್ವ ಇರುವುದಾಗಿ ಹೇಳಿದರು.

ಡಿಕೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಹರೀಶ್ ಕುಮಾರ್ ಮೊದಲಾದವರು ಮಾತನಾಡಿದರು. ಕಾಂಗ್ರೆಸ್ಸಿನ ಎಲ್ಲ ವರ್ಗದ ನಾಯಕರು ಇದರಲ್ಲಿ ಪಾಲ್ಗೊಂಡರು.