ಮೂರು ವರುಷದ ಪ್ರಧಾನಿ ಹುದ್ದೆಗೆ ಮಂಗಳ ಹಾಡಿದ ಬ್ರಿಟನ್ನಿನ ಬೋರಿಸ್ ಜಾನ್ಸನ್ ಅವರು ರಾಜಕೀಯದಲ್ಲಿ ಯಾರೂ ಅನಿವಾರ್ಯರಲ್ಲ ಎಂದು ಹೇಳಿ ರಾಜೀನಾಮೆ ನೀಡಿದರು.

ಲೋಕದ ಅತ್ಯುತ್ತಮ ಕೆಲಸ ಬಿಡಲು ದುಕ್ಕವಾಗುತ್ತದೆ ಎಂಬ ಸಂದೇಶವನ್ನೂ ಅವರು ನೀಡಿದ್ದಾರೆ. ಸರಣಿ ಹಗರಣ ಮತ್ತು ವಿವಾದಗಳ ಕಾರಣಕ್ಕೆ ಇತ್ತೀಚೆಗೆ ಅವರು ಸಂಪುಟದ ನಾಲ್ವರು ಸಚಿವರು ಮತ್ತೂ ಕೆಲವರು ರಾಜೀನಾಮೆ ನೀಡಿದ್ದರು.