ಕ್ಯಾಂಪ್ಕೊ ಲಿಮಿಟೆಡ್, 1973 ರಲ್ಲಿ ಸ್ಥಾಪಿಸಲಾದ ಪ್ರತಿಷ್ಠಿತ ಬಹು ರಾಜ್ಯ ಸಹಕಾರಿಸಂಘವಾಗಿದೆ.

ಭಾರತದಾದ್ಯಂತ ವ್ಯಾಪಕವಾದ ಸಂಗ್ರಹಣೆ ಮತ್ತು ಮಾರುಕಟ್ಟೆಯನ್ನು ಹೊಂದಿರುವ ಕ್ಯಾಂಪ್ಕೊ ಜನರಿಂದ ಜನರಿಗಾಗಿ ಜನರಿಗೋಸ್ಕರ ಸ್ಥಾಪಿತವಾದ ಸಹಕಾರಿಸಂಸ್ಥೆ. ಅಡಿಕೆ, ಕೊಕ್ಕೊ, ರಬ್ಬರ್ ಮತ್ತು ಇದೀಗಕರಿಮೆಣಸಿನ ವ್ಯವಹಾರಗಳ ಜೊತೆಗೆ ಕೊಕ್ಕೊ ಆಧಾರಿತ ಚಾಕೊಲೇಟ್ ಮತ್ತು ಇತರ ಅರೆ-ಸಿದ್ಧ ಕೊಕ್ಕೊ ಉತ್ಪನ್ನಗಳನ್ನು ಸಹ ತಯಾರಿಸಿ ಮಾರುಕಟ್ಟೆಗೆ ನೀಡುತ್ತಿದೆ. 

3576 ರೈತರಸದಸ್ಯತ್ವದೊಂದಿಗೆ ಶುರುವಾದ ಕ್ಯಾಂಪ್ಕೊ ಈಗ 1,38,000 ಕ್ಕೂ ಹೆಚ್ಚು ರೈತರ ಸದಸ್ಯತ್ವವನ್ನು ಹೊಂದಿದೆ. ಎಪ್ಪತ್ತರ ದಶಕದಲ್ಲಿ ಅಡಿಕೆ ಮಾರುಕಟ್ಟೆಯಲ್ಲಿ ಉಂಟಾದ ಏರುಪೇರಿನಿಂದ ರೈತರನ್ನು ಪಾರುಮಾಡಲು ಉತ್ಪನ್ನಗಳಿಗೆ ಸ್ಥಿರವಾದ ಮಾರುಕಟ್ಟೆಯನ್ನು ನೀಡುವ ಮೂಲಕ ಬೆಳೆಗಾರರ ಜೀವನದ ಗುಣಮಟ್ಟವನ್ನು ಸುಧಾರಿಸುವ ಮುಖ್ಯ ಉದ್ದೇಶದಿಂದ ಕ್ಯಾಂಪ್ಕೊ ಸ್ಥಾಪಿಸಲಾಯಿತು. ಕರ್ನಾಟಕ ಮತ್ತು ಕೇರಳ ಎರಡೂ ರಾಜ್ಯಗಳ ವಿಶಿಷ್ಟ ಸಂಯೋಜನೆಯ ಮುಖಾಂತರ ಕರ್ನಾಟಕ ಸಹಕಾರ ಸಂಘಗಳ ಕಾಯಿದೆಯಡಿಯಲ್ಲಿ ಶ್ರೀ ವಾರಣಾಶಿ ಸುಬ್ರಾಯ ಭಟ್ ಅವರ ರೈತೋಪಯೋಗಿ ದೂರದೃಷ್ಠಿತ್ವದಿಂದಸ್ಥಾಪಿಸಲಾದ ಕ್ಯಾಂಪ್ಕೊ ಲಿಮಿಟೆಡ್ ಅಂದಿನ ಅಡಿಕೆಮಾರುಕಟ್ಟೆಯ ಬಿಕ್ಕಟ್ಟಿನ ಪರಿಸ್ಥಿತಿಯನ್ನು ತಗ್ಗಿಸಿತು.

1986 ರಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕುಸಿತದಿಂದಾಗಿ, ಕೊಕ್ಕೊಗೆ ಯಾವುದೇ ಖರೀದಿದಾರರು ಇರಲಿಲ್ಲ. ಕೊಕ್ಕೊ ಬೆಳೆಗಾರರನ್ನು ಈ ಸಂಕಷ್ಟದಿಂದ ಪಾರು ಮಾಡಲು, ಆಗ್ನೇಯ ಏಷ್ಯಾದಲ್ಲಿ ಎರಡನೇ ಅತಿದೊಡ್ಡ ಚಾಕೊಲೇಟ್ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಮೂಲಕ ಕ್ಯಾಂಪ್ಕೊ ಮಹತ್ತರವಾದ ಜವಾಬ್ದಾರಿಯನ್ನು ವಹಿಸಿ ಕೊಕ್ಕೊ ಬೆಳೆಗಾರರ ಸಂಕಷ್ಟಕ್ಕೆ ಮಿಡಿಯಿತು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಕ್ಯಾಂಪ್ಕೊ ಚಾಕೊಲೇಟ್ ಫ್ಯಾಕ್ಟರಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ವರ್ಷಕ್ಕೆ 23,000 ಮೆಟ್ರಿಕ್ ಟನ್ ಉತ್ಪಾದನೆ ನೀಡುತ್ತಿದೆ. ಸ್ವಯಂಚಾಲಿತ ಮತ್ತು ಅತ್ಯಾಧುನಿಕ ಯಂತ್ರೋಪಕರಣಗಳೊಂದಿಗೆ ಸಂಪೂರ್ಣವಾಗಿ ಸುಸಜ್ಜಿತವಾದ ಕಾರ್ಖಾನೆಯನ್ನು ಅಂದಿನ ರಾಷ್ಟ್ರಪತಿಯಾಗಿದ್ದ ಶ್ರೀಗ್ಯಾನಿಜೈಲ್ ಸಿಂಗ್ ಅವರು ಉದ್ಘಾಟಿಸಿದರು. ಪರಿಸರ ಸ್ನೇಹಿ ಇಂಧನ ಬಳಕೆಗೋಸ್ಕರ ಕ್ಯಾಂಪ್ಕೊ ಮೂರು ವಿಂಡ್ ಮಿಲ್ ಘಟಕಗಳನ್ನು ಮತ್ತು 500 ಮೆಗಾ ವ್ಯಾಟ್ ಸೌರ ಫಲಕಗಳನ್ನು ಸ್ಥಾಪಿಸಿದೆ. ಫ್ಯಾಕ್ಟರಿಯಲ್ಲಿ ವಿ.ಎ.ಎಂ ಗಳನ್ನು ಕೂಡಾ ಸ್ಥಾಪಿಸಲಾಗಿದೆ.

ಸಮರ್ಥ ಆಡಳಿತಾಧಿಕಾರಿಯಾದ ಎ.ಕಿಶೋರ್ ಕುಮಾರ್ ಕೊಡ್ಗಿಯವರ ಅಧ್ಯಕ್ಷತೆಯಲ್ಲಿ, ವ್ಯವಸ್ಥಾಪಕ ನಿರ್ದೇಶಕರಾದ ಎಚ್. ಎಂ. ಕೃಷ್ಣಕುಮಾರ್ ಅವರ ನಾಯಕತ್ವದಲ್ಲಿ ಕ್ಯಾಂಪ್ಕೊ ದೇಶದಾದ್ಯಂತ  160 ಕ್ಕೂ ಹೆಚ್ಚು ಶಾಖೆಗಳನ್ನೂ, 2000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರೂ.2,778 ಕೋಟಿಗೂ ಹೆಚ್ಚು ವಾರ್ಷಿಕ ವಹಿವಾಟನ್ನು ಸಮರ್ಥಕವಾಗಿ ನಡೆಸುತ್ತಿದೆ. ಸದಸ್ಯರ ಸಹಕಾರ ಹಾಗೂಕ್ರಿಯಾತ್ಮಕ ನಾಯಕತ್ವ ಕ್ಯಾಂಪ್ಕೊದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿದೆ.

ಬದಲಾಗುತ್ತಿರುವ ಅಡಿಕೆ ಮಾರುಕಟ್ಟೆಯ ಸ್ಥಿತಿ - ಗತಿ, ಮಾರುಕಟ್ಟೆಯ ಏರುಪೇರುಗಳನ್ನು ಸಮರ್ಥವಾಗಿ ಎದುರಿಸಿಬೆಳೆಗಾರರ, ಸದಸ್ಯರ ವಿಶ್ವಾಸವನ್ನು ಗಳಿಸಿಭವಿಷ್ಯದಲ್ಲಿಯೂ ರೈತರ ಹಿತಾಸಕ್ತಿಯನ್ನು ಕಾಪಾಡುವಭರವಸೆ ನೀಡುತ್ತಾ ಸಾಗುತ್ತಿದೆ ಕ್ಯಾಂಪ್ಕೊ.