ಮಂಗಳೂರು:- ಮಂಗಳೂರಿನ ಸಂತ ತೆರೆಜಾ ಚರ್ಚಿನಲ್ಲಿ ಆಯೋಜಿಸಲಾದ 4 ದಿನಗಳ ರಿಟ್ರಿಟ್ (ಧ್ಯಾನಕೂಟ) ದ ಸಮಾರೋಪವು ಚರ್ಚಿನಲ್ಲಿ ನಡೆಯಿತು. ಧ್ಯಾನ ಕೂಟದಲ್ಲಿ ಆದ್ಯಾತ್ಮಿಕ ವಿಷಯಗಳನ್ನು ರಿಟ್ರೀಟ್ ನಡೆಸಿಕೊಟ್ಟ ವಂದನೀಯ ಫಾ. ಮೆಲ್ವಿನ್ ನೊರೋನ್ಹ (ಪಕ್ಷಿಕೆರೆ ಚರ್ಚಿನ ಧರ್ಮಗುರುಗಳು) ಮನದಟ್ಟುವಂತೆ ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಜ್ಯುಡಿಷಿಯಲ್ ವಿಕಾರ್ ಮಂದನೀಯ ಫಾ. ವಾಲ್ಟರ್ ಡಿ’ಮೆಲ್ಲೊ ಧನ್ಯವಾದವಿತ್ತರು. ಚರ್ಚಿನ ಪಾಲನಾಸಮಿತಿಯ ಉಪಾಧ್ಯಕ್ಷ ವಿಲಿಯಂ ಲೋಬೊ, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಧ್ಯಾನಕೂಟಕ್ಕೆ ಸಂಗೀತ ನೀಡಿದ ಸೈಮನ್ ಬಜಾಲ್ ಉಪಸ್ಥಿತರಿದ್ದರು.