ಉಜಿರೆ: “ಮನುಷ್ಯನ ವ್ಯಕ್ತಿತ್ವವನ್ನು ಮರೆಮಾಚುವ, ಸಹಜ ಸ್ವಭಾವವನ್ನು ಮರೆತು ಬಾಳಲು ಪ್ರೇರೇಪಿಸುವ, ಯಾವುದೇ ನೀಚ, ಅಮಾನವೀಯ, ಕ್ರೂರ, ಸೇಡು ತೀರಿಸಿಕೊಳ್ಳುವ ಕಾರಣಕ್ಕಾಗಿ ಸುಲಭವಾಗಿ ಉಪಯೋಗಿಸುವ ವಸ್ತುಗಳೇ ಮದ್ಯಪಾನ ಮತ್ತು ಮಾದಕ ವಸ್ತುಗಳು. ಇತ್ತೀಚೆಗೆ ಯುವಜನತೆ ಮಾದಕ ವಸ್ತುಗಳ ಬಳಕೆಯ ಒಲವಿಗೆ ಮತ್ತು ಆಕರ್ಷಣೆಗೆ ಒಳಗಾಗುತ್ತಿದ್ದಾರೆ. ವ್ಯಸನವೆಂಬ ಪ್ರವಾಹದಲ್ಲಿ ಕೊಚ್ಚಿ ಹೋಗುವವರನ್ನು ಮೇಲೆ ತರಲು ಪ್ರಯತ್ನಿಸುವುದು ಸುಲಭವೇನಲ್ಲ. ಇಂತಹವರೊಂದಿಗೆ ಜಾಗ್ರತೆ ಮತ್ತು ಜಾಣ್ಮೆಯಿಂದ ವ್ಯವಹರಿಸಬೇಕಾಗಿದೆ. ಮನಸ್ಸಿನ ಪರಿವರ್ತನೆಯೇ ಬದಲಾವಣೆಯ ಮುಹೂರ್ತಕ್ಕೆ ಸಾಕ್ಷಿಯಾಗಿದೆ” ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಡಾ| ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದರು. ಅವರು ಇಂದು ಉಜಿರೆ, ಲಾೈಲದಶ್ರೀ ಕ್ಷೇತ್ರ ಧರ್ಮಸ್ಥಳ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾದ 158ನೇ ವಿಶೇಷ ಮದ್ಯವರ್ಜನ ಶಿಬಿರದ 66ಮಂದಿ ಶಿಬಿರಾರ್ಥಿಗಳನ್ನುಉದ್ದೇಶಿಸಿ ಮಾತನಾಡುತ್ತಿದ್ದರು.
ಮದ್ಯಪಾನ ಮತ್ತು ಮಾದಕ ವಸ್ತುಗಳ ವೈಭವೀಕರಣ ಸಲ್ಲದು,“ನಾಟಕ, ಸಿನೆಮಾ, ಧಾರವಾಹಿಗಳಲ್ಲಿ ಕುಡುಕನೇ ವಿದೂಷಕ. ಕುಡಿತ ಪಾಪಕೃತ್ಯಗಳನ್ನು ಮಾಡಲುಉತ್ತೇಜಿಸುವ ವಂಚಕ ಪ್ರೇಯ. ಸ್ಥಿತಪ್ರಜ್ಞೆಯಿಂದ ಹೊರಬಂದುತನ್ನನ್ನುತಾನು ಮರೆತು ಮಾಡುವ ಕೆಟ್ಟ ಕಾರ್ಯಗಳೆ ಮೂಲ ಕಾರಣವೇ ಅಮಲು ಪದಾರ್ಥಗಳಾಗಿವೆ. ಆದುದರಿಂದ ಜಾಹೀರಾತುಗಳಲ್ಲಿ, ಸಿನೆಮಾಗಳಲ್ಲಿ ಮದ್ಯಪಾನ ಮತ್ತು ಮಾದಕ ವಸ್ತುಗಳ ವೈಭವೀಕರಣವನ್ನು ನಿಲ್ಲಿಸಬೇಕು, ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಡಾ| ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದರು
ಈ ಶಿಬಿರದಲ್ಲಿ ಕರ್ನಾಟಕರಾಜ್ಯದ ವಿವಿಧ ಕಡೆಗಳ ಪ್ರತಿಷ್ಠಿತಕುಟುಂಬದ ವ್ಯಕ್ತಿಗಳು ಗೌಪ್ಯವಾಗಿ ಮದ್ಯಪಾನದಿಂದ ಬಿಡುಗಡೆ ಹೊಂದಬೇಕೆಂಬ ಆಕಾಂಕ್ಷೆಯಿಂದ ಬಂದವರಾಗಿರುತ್ತಾರೆ. 4 ಮಂದಿ ಶಿಕ್ಷಕರು, 6 ಮಂದಿ ಪೋಲೀಸು ಅಧಿಕಾರಿಗಳು, ಪಂಚಾಯತ್ ಸದಸ್ಯರು, ತಾಂತ್ರಿಕ ಉದ್ಯೋಗಿಗಳು, ಸ್ವ ಉದ್ಯೋಗಿಗಳು ಭಾಗವಹಿಸಿರುತ್ತಾರೆ. ಮುಖ್ಯವಾಗಿ ಇವರನ್ನು ಸಂಪೂರ್ಣ ಚಿಕಿತ್ಸೆಗೆ ಹೊಂದಿಕೊಳ್ಳುವಂತೆ ಮಾಡಲುದೇಹ ಮತ್ತು ಮನಸ್ಸಿನ ಮೇಲಾದ ಕೆಟ್ಟ ಪರಿಣಾಮಗಳಿಗೆ ಸಲಹೆ ಮತ್ತು ಚಿಕಿತ್ಸೆಗಳನ್ನು ನೀಡಿ ಪರಿವರ್ತನೆಗೆ ಸಹಕಾರಿಯಾಗಲು ಕಾರ್ಯಕ್ರಮವನ್ನು ರೂಪಿಸಲಾಗಿದೆ. ಕೆ.ಎಸ್.ಹೆಗ್ಡೆ ಆಸ್ಪತ್ರೆ, ದೇರಳಕಟ್ಟೆ ಇಲ್ಲಿನ ಮನೋವೈದ್ಯರು ಶಿಬಿರಾರ್ಥಿಗಳ ಸಂಪೂರ್ಣ ಯೋಗ ಕ್ಷೇಮ ಚಿಂತನೆಯೊಂದಿಗೆ ವಿಮರ್ಶೆ ನಡೆಸಿ ಚಿಕಿತ್ಸೆ ನಡೆಸುತ್ತಿದ್ದಾರೆ.
ವೈದ್ಯಾಧಿಕಾರಿಗಳಾದ ಡಾ. ಬಾಲಕೃಷ್ಣ ಭಟ್, ಡಾ. ಮೋಹನ್‍ದಾಸ್‍ಗೌಡ ಶಿಬಿರಾರ್ಥಿಗಳ ದೈಹಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡಿರುತ್ತಾರೆ. ಶಿಬಿರ ಸಂಘಟನೆಗೆ ಅಖಿಲ ಜನಜಾಗೃತಿ ಪ್ರಾದೇಶಿಕ ಕಛೇರಿಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾೈಸ್, ಯೋಜನಾಧಿಕಾರಿಗಳಾದ ಮೋಹನ್, ಶಿಬಿರಾಧಿಕಾರಿ ದಿವಾಕರ್, ಆರೋಗ್ಯ ಸಹಾಯಕಿ ಸೌಮ್ಯ ಸಹಕರಿಸಿರುತ್ತಾರೆ. ಕಾರ್ಯಕ್ರಮದಲ್ಲಿ ಪೂಜ್ಯ ಆಪ್ತ ಕಾರ್ಯದರ್ಶಿಗಳಾದ ವೀರು ಶೆಟ್ಟಿ ಉಪಸ್ಥಿತರಿದ್ದರು. ಮುಂದಿನ ವಿಶೇಷ ಶಿಬಿರವು ಮಾರ್ಚ್ 15, 2021 ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.