ಬೆಳಗಾವಿಯಲ್ಲಿ ಸರಕಾರ ಮತಾಂತರ ನಿಷೇಧ ಮಸೂದೆ ಮಂಡಿಸುವಾಗಲೆ ಬೆಂಗಳೂರಿನಲ್ಲಿ ಕ್ರಿಶ್ಚಿಯನ್ ಸಮುದಾಯದವರು, ಎಡ ಒಲವಿನವರು, ಬುದ್ಧಿಜೀವಿಗಳು ಸೇರಿ ಪ್ರತಿಭಟನೆ ನಡೆಸಿದರು ಹಾಗೂ ಮೈಸೂರು ಬ್ಯಾಂಕ್ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಚಲೋ ನಡೆಸಿದರು.
ಜನರಿಗೆ ಯಾವುದೇ ರೀತಿಯಲ್ಲಿ ಸೇವೆ ಸಲ್ಲಿಸದೆ, ಖರೀದಿ ಶಾಸಕರನ್ನು ಇಟ್ಟುಕೊಂಡಿರುವ ಬಿಜೆಪಿ ಮತಾಂತರ ನಿಷೇಧ ಕಾಯ್ದೆ ತರುತ್ತಿರುವುದು ನಾಚಿಕೆಗೇಡು. ಜನರ ಗಮನ ಬೇರೆ ಕಡೆ ಸೆಳೆಯುವ ತಂತ್ರ ಎಂದು ಕಮ್ಯೂನಿಸ್ಟ್ ನಾಯಕ ಸಿದ್ದನಗೌಡ ಪಾಟೀಲ ಹೇಳಿದರು.
ಆರ್ಚ್ ಬಿಶಪ್ ಪೀಟರ್ ಮಚಾದೊ ಅವರು ಇದು ಈ ಸರಕಾರ ನೀಡಿರುವ ಕ್ರಿಸ್ಮಸ್ ಕೊಡುಗೆ ಎಂದು ಹೇಳಿದ್ದಾರೆ.