ಕಳೆದ ವರುಷವಿಡೀ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಸಿ 26 ಲಕ್ಷ ಕೋಟಿ ರೂಪಾಯಿ ಬಾಚಿದ್ದೀರಿ. ರಾಜ್ಯಗಳಿಗೆ ಅದರಲ್ಲಿ ಪಾಲು ನೀಡಿದ್ದೀರಾ? ಕೇಂದ್ರ ಅಬಕಾರಿ ಸುಂಕವನ್ನು ನೂರಾರು ಪಟ್ಟು ಏರಿಸಿ, ಮೂರರಷ್ಟು ಇಳಿಸಿ ರಾಜ್ಯಗಳು ಬೆಲೆ ಇಳಿಸಿಲ್ಲ ಎಂದು ಸೋಗು ಹಾಕಿದ್ದೀರಾ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ಮೋದಿಯವರನ್ನು ಪ್ರಶ್ನಿಸಿದ್ದಾರೆ.
ರಾಜ್ಯ ಅಬಕಾರಿ ಸುಂಕ ಇಳಿಸಲಿ ಎಂಬ ನಿಮ್ಮ ಬುದ್ಧಿವಾದ ಅಗತ್ಯವಿಲ್ಲ. ರಾಜ್ಯದ ವ್ಯಾಟ್ ಪಾಲು ಸರಿಯಾಗಿ ಕೊಡದ ನಿಮ್ಮಿಂದ ರಾಜ್ಯಗಳಿಗೆ ನೀತಿ ಫಾಠ ಏಕೆ? ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಏರುತ್ತದೆ ಎನ್ನುವಾಗಲೆ, ಬೆಲೆ ಏರಿಸಿದ್ದೀರಿ. ಜಾಗತಿಕವಾಗಿ ಗೋಧಿ ಬೆಲೆ ಏರಿದಾಗ ಇಲ್ಲಿನ ರೈತರ ಗೋಧಿಗೆ ಹೆಚ್ಚಿನ ಬೆಂಬಲ ಬೆಲೆ ಏನಾದರೂ ನೀಡಿದ್ದೀರಾ ಎಂದು ಖೇರಾ ಪ್ರಧಾನಿಗೆ ಸವಾಲು ಹಾಕಿದರು.