ಮಂಗಳೂರು: ಮಂಗಳೂರು ಪುರಭವನದಲ್ಲಿ ಹೆಚ್ಚುವರಿ ಪೋಲೀಸು ಮಹಾ ನಿರ್ದೇಶಕರಾದ ಅಲೋಕ್ ಕುಮಾರ್ ಅವರು ಮಂಗಳೂರು ನಗರ ಪೋಲೀಸು ಅಧಿಕಾರಿ ಮತ್ತು ಪೋಲೀಸು ಸಿಬ್ಬಂದಿ ಜೊತೆಗೆ ಸಂವಾದ ಕಾರ್ಯಕ್ರಮ ನಡೆಸಿದರು.
ಪೋಲೀಸು ಸಿಬ್ಬಂದಿ ಮತ್ತು ಪೋಲೀಸು ಅಧಿಕಾರಿಗಳು ಕರ್ತವ್ಯ ನಿರ್ವಹಣೆಯಲ್ಲಿ ಯಾವ ಬಗೆಯಲ್ಲಿ ಮುನ್ನಡೆಯಬೇಕು ಹಾಗೂ ಹೊಸ ಪೋಲೀಸು ಸಿಬ್ಬಂದಿ ಹೇಗೆ ಕರ್ತವ್ಯ ಬದ್ಧರಾಗಬೇಕು ಎಂಬ ಬಗೆಗೆ ಈ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.