ಉಜಿರೆ: ಗಡಿನಾಡು ಕಾಸರಗೋಡಿನಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದಆಶ್ರಯದಲ್ಲಿ ನಿರ್ಮಿಸಲಾಗುವ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ  ಭವನ ನಿರ್ಮಾಣಕ್ಕೆಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನೀಡಿದ ಹತ್ತು ಲಕ್ಷರೂ. ಮೊತ್ತದಡಿ.ಡಿ.ಯನ್ನು ಶುಕ್ರವಾರ ಧರ್ಮಸ್ಥಳದಲ್ಲಿ ಡಿ. ಹಷೇಂದ್ರ ಕುಮಾರ್ ಪ್ರತಿಷ್ಠಾನದ ಸಮಿತಿಯವರಿಗೆ ನೀಡಿ ಶುಭ ಹಾರೈಸಿದರು.

ಪ್ರತಿಷ್ಠಾನದ ಅಧ್ಯಕ್ಷ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಲಕ್ಷ್ಮೀ ನಾರಾಯಣ ತಂತ್ರಿ (ಕೋಶಾಧಿಕಾರಿ), ರಾಧಾ ಕೃಷ್ಣ ಕಲ್ಚಾರ್ (ಅರ್ಥಧಾರಿಗಳು), ವಿಟ್ಲ ಮತ್ತು ಜಗದೀಶ ಕೆ. ಕೂಡ್ಲು ಡಿ.ಡಿ. ಪಡೆದು ಕೃತಜ್ಞತೆ ವ್ಯಕ್ತಪಡಿಸಿದರು.