ಮಂಗಳೂರಿನ ಖ್ಯಾತ ಹೋಟೆಲ್ ಉದ್ಯಮಿ,ಶ್ರೀದೇವಿ ವಿದ್ಯಾ ಸಮೂಹ ಸಂಸ್ಥೆ ಗಳ ಮುಖ್ಯಸ್ಥ, ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಸ್ಥಾಪಕಧ್ಯಕ್ಷ ಎ. ಸದಾನಂದ ಶೆಟ್ಟಿ ಅವರ ಧರ್ಮಪತ್ನಿ ಮೂಲ್ಕಿ ಕುಬೆವೂರು ದೊಡ್ಡಮನೆ ಮೈನಾ ಎಸ್ ಶೆಟ್ಟಿ(75 ವರ್ಷ)ಅವರು ಅಲ್ಪ ಕಾಲದ ಆಸಾವಖ್ಯ ದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ರಾತ್ರಿ 8 ಕ್ಕೆ ನಿಧನರಾದರು.
ಮೃತ ರು ಶ್ರೀದೇವಿ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಯಾಗಿದ್ದು ಶ್ರೀದೇವಿ ಸಮೂಹ ಸಂಸ್ಥೆ ಗಳನ್ನು ಕಟ್ಟಿ ಬೆಳೆಸಿದವರು. ಮಂಗಳೂರಿನ ಕ್ವಾಲಿಟಿ-ಕುಡ್ಲ ಹೋಟೆಲ್ ಸಮೂಹ ಗಳನ್ನು ತನ್ನ ಕ್ರಿಯಾಶೀಲತೆ ಇಂದ ಬೆಳೆಸಿ, ರಾಜ್ಯದ ಪ್ರತಿಷ್ಠಿತ ಕೇಟರಿಂಗ್ ಸಂಸ್ಥೆ ಯಾಗಿ ರೂಪು ಗೊಳ್ಳುವಲ್ಲಿ ಶ್ರಮಿಸಿದವರು. ಜಿಲ್ಲೆಯ ಹಲವಾರು ಪ್ರತಿಷ್ಠಿತ ಕೇಟರಿಂಗ್, ಹೋಟೆಲ್ ಉದ್ಯಮಿಗಳಿಗೆ ಮಾರ್ಗದರ್ಶಿ ಹಿರಿಯರಾಗಿದ್ದವರು. ಬೆಂಗಳೂರು,ಮಂಗಳೂರಿನಲ್ಲಿ ನಡೆದಿದ್ದ ಚಾರಿತ್ರಿಕ ವಿಶ್ವ ಬಂಟರ ಸಮ್ಮೇಳನ ದ ಊಟಪಚಾರದ ಸಂಪೂರ್ಣ ಜವಾಬ್ದಾರಿ ಯನ್ನು ಯಶಸ್ವಿಯಾಗಿ ನಿರ್ವಹಿಸಿದವರು. ಸರಳ ಸಜ್ಜನಿಕೆಯಿಂದ ಎಲ್ಲರ ಪ್ರೀತಿ gawrawa ಗಳಿಗೆ ಪಾತ್ರರಾಗಿದ್ದರು.
ಮೂಲ್ಕಿ ಕುಬೆವೂರು ದೊಡ್ಡಮನೆಯ ಕುಟುಂಬ ಸ್ನೇಹ ಮಿಲನ ವ್ಯವಸ್ಥೆಯಲ್ಲಿ ಮುಂಚೂಣಿ ಯಲ್ಲಿದ್ದರು.
ಮೃತರು ಪತಿ, ಇಬ್ಬರು ಪುತ್ರರನ್ನು ಹಾಗೂ ಅಪಾರ ಅಭಿಮಾನಿ ಬಂಧುಗಳನ್ನು ಅಗಲಿದ್ದಾರೆ.
ಮೃತರ ಅಂತಿಮ ದರ್ಶನ ಗುರುವಾರ ಬೆಳಿಗ್ಗೆ 10.30 ರಿಂದ 11.30 ರ ತನಕ ಮಂಗಳೂರು ಎಮ್. ಜಿ. ಕ್ರಾಸ್ ರಸ್ತೆ ಯ "ಸದಾನಂದ " ಸ್ವಗೃಹ ದಲ್ಲಿ ಪಡೆಯಬಹುದು.