ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನಾಲ್ಕು ರಾಜ್ಯಗಳ ನಾಲ್ವರು ಗಣ್ಯರನ್ನು ರಾಜ್ಯ ಸಭೆಗೆ ನೇಮಕ ಮಾಡಿ ಆದೇಶ ಹೊರಡಿಸಿದರು.
ಕರ್ನಾಟಕದ ತುಳುನಾಡಿನ ಡಾ. ವೀರೇಂದ್ರ ಹೆಗ್ಗಡೆ, ಕೇರಳದ ಪಿ. ಟಿ. ಉಷಾ, ತಮಿಳುನಾಡಿನ ಇಳಯರಾಜಾ, ತೆಲಂಗಾಣದ ವಿ. ವಿಜಯೇಂದ್ರ ಪ್ರಸಾದ್ ರಾಜ್ಯ ಸಭೆಗೆ ನೇಮಕಗೊಂಡವರು.
1948ರಲ್ಲಿ ಹುಟ್ಟಿದ ಹೆಗ್ಗಡೆಯವರು 20ರ ಪ್ರಾಯದಲ್ಲಿ ಧರ್ಮಸ್ಥಳದಲ್ಲಿ ಪಟ್ಟಕ್ಕೆ ಬಂದು ಸಮಾಜ ಸೇವೆಯಲ್ಲಿ ಅಪಾರ ಸಾಧನೆ ಮಾಡಿದವರು.
ಓಟದ ರಾಣಿ ಪಿ. ಟಿ. ಉಷಾ ದೇಶದ ಆಟದ ಅಂಗಣದ ದಂತಕಥೆ ಆಗಿದ್ದವರು.
ಅಂತ್ಯಜ ಬಡ ಕುಟುಂಬದಿಂದ ಬಂದ ಇಳಯರಾಜಾರ ಸಂಗೀತ ಸಾಧನೆ ಎದುರಿಲ್ಲದ್ದು.
ತೆಲುಗು ಚಿತ್ರ ಸಾಹಿತ್ಯದಲ್ಲಿ ವಿಜಯೇಂದ್ರ ಪ್ರಸಾದ್ ಸಾಧನೆ ದೊಡ್ಡದು.