ಮಂಗಳೂರು: ಡಿ.1 ರಂದು ಮಂಗಳೂರಿನ ಶಕ್ತಿ ವಿದ್ಯಾಸಂಸ್ಥೆಯಲ್ಲಿ ಗೀತಾ ಜಯಂತೀ ಕಾರ್ಯಕ್ರಮ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆನರಾಕಾಲೇಜಿನ ನಿವೃತ್ತ ಪ್ರಾಂಶುಪಾಲರೂ ಹಿರಿಯ ಸಂಸ್ಕøತ ವಿದ್ವಾಂಸರಾದ ಡಾ. ಜಿ. ಎನ್ ಭಟ್ಟ ಮಾತನಾಡಿ ಭಗವದ್ಗೀತೆ ಮಾನಸಿಕ ಆರೋಗ್ಯ ಹಾಗೂ ಏಕಾಗ್ರತೆಗೆ ಸಹಕಾರಿ. ಭಗವದ್ಗೀತೆಎಲ್ಲವನ್ನೂ ಹೇಳಿದೆ. ಯುದ್ಧದಿಂದ ವಿಮುಖನಾದ ಅರ್ಜುನನಿಗೆ ರಣರಂಗದಲ್ಲಿ ಕೃಷ್ಣ ಉಪದೇಶಿಸಿದ ಭಗವದ್ಗೀತೆ ನಮ್ಮ ಜೀವನದಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ.
ಓಂಕಾರ ಧ್ಯಾನದಿಂದ ಅನೇಕ ರೋಗಗಳು ನಿವಾರಣೆ ಆಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಕ್ತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸಂಜಿತ್ ನಾಯಕ್, ಪ್ರಧಾನ ಸಲಹೇಗಾರ ರಮೇಶ್ ಕೆ, ಶಕ್ತಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಪೃಥ್ವಿರಾಜ ಹಾಗೂ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ವಿದ್ಯಾಕಾಮತ್. ಜಿ ಉಪಸ್ಥಿತರಿದ್ದರು. ಪದವಿ ಪೂರ್ವಕಾಲೇಜಿನ ಸಂಸ್ಕøತ ಉಪನ್ಯಾಸಕರ ವಿಶಂಕರ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.