ಮಂಗಳೂರು: ಡಾಕ್ಟರೇಟ್ ಪದವಿ, ಚಿನ್ನದ ಪದಕ ಪಡೆಯುವುದು ಎಂದರೆ ಅದು ಅಷ್ಟೊಂದು ಸುಲಭದ ಸಾಧನೆ ಅಲ್ಲ. ಇದರಲ್ಲಿ ಸಾಧನೆ ಮಾಡಿದವರನ್ನು ಗೌರವಿಸುವುದು ನಮ್ಮ ಕರ್ತವ್ಯ.ಪದವಿ,ಪದಕ ಪಡೆಯಲು ಕಠಿನ ಪರಿಶ್ರಮ ಪಡೆಯಬೇಕಾಗುತ್ತದೆ.ವಿಜ್ಞಾನ ಮತ್ತು ತಂತ್ರಜ್ಞಾನ ಬಹಳಷ್ಟು ಕಠಿನ ಇರುತ್ತದೆ.ಅದರಲ್ಲಿ  ಪದಕ ಪಡೆಯುವುದು  ದೊಡ್ಡ ಸಾಧನೆ ಎಂದು ಯೆನೆಪೋಯ ವಿವಿ ಇಸ್ಲಾಮಿಕ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ದ ಮುಖ್ಯಸ್ಥ   ಡಾ.ಜಾವೆದ್ ಜಮೀಲ್ ಹೇಳಿದರು

ಅವರು ಅಖಿಲ ಭಾರತ ಬ್ಯಾರಿ ಪರಿಷತ್ (ರಿ) ಇದರ ಆಶ್ರಯದಲ್ಲಿ  ನಗರದ ಶ್ರೀನಿವಾಸ ಹಾಲ್ ನಲ್ಲಿ  ನಡೆದ ಸಾಧಕರಿಗೆ ಗೌರವಾರ್ಪಣೆ ಸಮಾರಂಭದಲ್ಲಿ  ಸಾಧಕರನ್ನು ಗೌರವಿಸಿದ ಬಳಿಕ ಮಾತನಾಡಿದರು.

ಧರ್ಮ ದಲ್ಲಿ ಕೆಲವು ನಿಯಮ ನಿಬಂಧನೆಗಳು ಇವೆ.ಅದನ್ನು ನಾವು ಪಾಲನೆ ಮಾಡಬೇಕು. ಮುಸ್ಲಿಮರಿಗೆ ಅಮಲು ಪದಾರ್ಥ ನಿಷಿದ್ಧ. ಅದನ್ನು ಬಳಕೆ ಮಾಡಲು ಅವಕಾಶ ಇರುವುದಿಲ್ಲ.ಇದೇ ರೀತಿ ಬೇರೆ ಬೇರೆ ಧರ್ಮಗಳ ಲ್ಲಿ ಬೇರೆ ಬೇರೆ ನಿಯಮಗಳು ಇವೆ.ಆದರೆ ಧರ್ಮಗಳ ನಡುವೆ ಸಮನ್ವಯತೆ, ಐಕ್ಯತೆ ಅವಶ್ಯಕತೆ ಇದೆ.ಅದಕ್ಕೆ ಒತ್ತು ನೀಡಬೇಕು ಎಂದು ಕರೆ ನೀಡಿದರು

ಅಹಿಂದ ಜಿಲ್ಲಾಧ್ಯಕ್ಷ ವಾಸುದೇವ ಬೋಳೂರು ಮಾತನಾಡಿ, ಸಿದ್ದರಾಮಯ್ಯ ಅವರ ಅಹಿಂದ ಕ್ಕಿಂತ ಐದು ವರ್ಷ ಮೊದಲೇ ನಾವು ಈ ಸಂಘಟನೆ ಯನ್ನು ಸ್ಥಾಪನೆ ಮಾಡಿದ್ದೇವೆ.ದೇಶದಲ್ಲಿ ಈ ಮೂರು ವರ್ಗದವರಲ್ಲಿ  ಅಧಿಕಾರ ದಲ್ಲಿರುವುದು ಕೇವಲ ಶೇ.3 ಮಾತ್ರ.ಈ ಅಹಿಂದ ಅಭಿವೃದ್ಧಿ ಗಾಗಿ ಜೊತೆಯಾಗಿ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಶಾಹುಲ್ ಹಮೀದ್ ಮೆಟ್ರೋ   ಕಿರಾಅತ್ ಪಠಿಸಿ ಕಾರ್ಯಕ್ರಮ ಉದ್ಘಾಟಿಸಿದರು.ಮಾಜಿ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಡಾ.ಧರ್ಮದರ್ಶಿ  ಹರಿಕೃಷ್ಣ ಪುನರೂರು , ರಾಜೀವ್ ಗಾಂಧಿ ಆರೋಗ್ಯ ವಿಜ್ನಾನ ಗಳ ಯೂನಿವರ್ಸಿಟಿ ಯಿಂದ ಚಿನ್ನದ ಪದಕ ಪಡೆದ ಡಾ.ಲಿಫಾಮ್ ರೋಶನಾರ ,ಡಾ.ಸುಮತಿ ಹೆಗ್ಡೆ ಅವರನ್ನು ಗೌರವಿಸಲಾಯಿತು. 

ಗೌರವ ಸ್ವೀಕರಿಸಿದ ಬಳಿಕ ಮಾತನಾಡಿದ ಹರಿಕೃಷ್ಣ ಪುನರೂರು ಅವರು, ಸಾಧಕರನ್ನು ಅಖಿಲ ಭಾರತ ಬ್ಯಾರಿ ಪರಿಷತ್ ಗುರುತಿಸಿರುವುದು ಸ್ವಾಗತಾರ್ಹ.ನಾನು ಯಾವ ಪಾರ್ಟಿ ಯವನ್ನಲ್ಲ.ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ನಾವು ಒಟ್ಟಾಗಿದ್ದು ಕೆಲಸ ಮಾಡಬೇಕಾಗಿದೆ.ಬಡವರಿಗೆ ನೆರವಾಗುವುದು ನಮ್ಮ ಕರ್ತವ್ಯ ಆಗಿದೆ. ಸಮಾಜದ ಬೆಳವಣಿಗೆಗೆ ಸಹಕಾರ ನೀಡಿದರೆ ಆರ್ಥಿಕ ಸ್ಥಿತಿ ಕೊರತೆ ಆಗುವುದಿಲ್ಲ.ಸಮಾಜದ ಒಳಿತಿಗಾಗಿ ನಾವು ಜೊತೆ ಯಾಗಿ ಕೆಲಸ ಮಾಡೋಣ ಎಂದು ಹೇಳಿದರು.

ಅಖಿಲ ಭಾರತ ಬ್ಯಾರಿ ಪರಿಷತ್ ಗೌರವ ಅಧ್ಯಕ್ಷ ಯೂಸುಫ್ ವಕ್ತಾರ್ , ಕಾರ್ಯ ದರ್ಶಿ ಹನೀಫ್ ಬಜಾಲ್ ಸನ್ಮಾನ ಪತ್ರ ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ  ಅಖಿಲ ಭಾರತ ಬ್ಯಾರಿ ಪರಿಷತ್ ಉಪಾಧ್ಯಕ್ಷ ಇಬ್ರಾಹಿಂ ನಡುಪದವು,  ಕಾರ್ಪೊರೇಟರ್ ಅಬ್ದುಲ್ ಲತೀಫ್ ಕಂದಕ್,ಡಾ.ಸುಮತಿ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. 

ಅಖಿಲ ಭಾರತ ಬ್ಯಾರಿ ಪರಿಷತ್ ಕೋಶಾಧಿಕಾರಿ ನಿಸಾರ್ ಫಕೀರ್ ಮಹಮ್ಮದ್ ಸ್ವಾಗತಿಸಿದರು.ಪ್ರಧಾನ ಕಾರ್ಯ ದರ್ಶಿ ಅಬ್ದುಲ್ ಅಝೀಝ್ ಹಕ್ ಕಾರ್ಯಕ್ರಮ ನಿರೂಪಿಸಿದರು.ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್ ವಂದಿಸಿದರು