ಬಳ್ಕುಂಜೆ ಗ್ರಾಮ ಪಂಚಾಯತ್ ಕುಕ್ಕಟ್ಟೆ ಕೊಲ್ಲೂರು ಮೊಡ್ತೀನ್ ಡಿಸೋಜ ಇವರ ಮೊಮ್ಮಗ ವಲೇರಿಯನ್ ಡಿಸೋಜ ಕೊಡುಗೆಯಾಗಿ ನೀಡಿದ ರಿಕ್ಷಾ ಪಾರ್ಕ್ ಉದ್ಘಾಟನೆ ಕುಕ್ಕಟ್ಟೆ ಯಲ್ಲಿ ನಡೆಯಿತು.
ರಿಕ್ಷಾ ಪಾರ್ಕ್ ಉದ್ಘಾಟನೆಯನ್ನು ವಲೇರಿಯನ್ ಡಿಸೋಜ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳ್ಕುಂಜೆ ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಮಮತ ಡಿ ಪೂಂಜಾ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮುಲ್ಕಿ ಮೂಡಬಿದ್ರಿ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್, ಮುಲ್ಕಿ ಮೂಡಬಿದ್ರಿ ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್ ಭಾಗವಹಿಸಿದ್ಧರು.
ಮುಖ್ಯ ಅತಿಥಿಗಳಾಗಿ ಜೋಸೆಫ್ ಪುರ್ಟಡೊ ಕಟೀಲು, ವಕೀಲ ಶಶಿಧರ ಅಡ್ಯಂತಾಯ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಎಲ್ಲಪ್ಪ ಸಾಲಿಯಾನ್, ಐಕಳ ಮಾಜಿ ಉಪಾಧ್ಯಕ್ಷ ರಾಜೇಶ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯೆ ಸುಜಾತಾ ಪ್ರಭಾಕರ್, ದೇವದಾಸ ಮಲ್ಯ, ಇಂದಿರಾ ಅಮೀನ್, ಕುಕ್ಕಟ್ಟೆ ಕೊಲ್ಲೂರು ಆಟೋ ಚಾಲಕ ಮಾಲಕ ಸಂಘ ಅಧ್ಯಕ್ಷ ವಸಂತ ಮತ್ತಿತರರು ಉಪಸ್ಥಿತರಿದ್ದರು. ಉದಯ ನಾಯ್ಕ ಧನ್ಯವಾದ ಅರ್ಪಿಸಿದರು. ಬಳ್ಕುಂಜೆ ಗ್ರಾಮ ಪಂಚಾಯತ್ ಸದಸ್ಯ, ಆನಂದ ಸ್ವಾಗತಿಸಿ ಕಾರ್ಯಕ್ರಮ ನಿರೂಪಿದರು.