ಮಂಗಳೂರು: ಮಂಗಳಾ ಆಸ್ಪತ್ರೆ ಮಂಗಳೂರು - ಮಂಗಳೂರಿನ ಕದ್ರಿ ವಜ್ರ ಹಿಲ್ಸ್ ನ ಮಂಗಳಾ ಆಸ್ಪತ್ರೆಯಲ್ಲಿ ಆಯುರ್ವೇದ ವಿಭಾಗದ ಹೊರ ರೋಗಿಗಳ ವಿಭಾಗವನ್ನು  ಆಸ್ಪತ್ರೆಯ ಮುಖ್ಯಸ್ಥರಾದ ಡಾ ಗಣಪತಿ ಯವರ ದಿವ್ಯ ಹಸ್ತದಿಂದ ದೀಪ ಬೆಳಗಿ ಉದ್ಘಾಟಿಸಲಾಯಿತು.

ಮಂಗಳೂರಿನ ಖ್ಯಾತ ಅನುಭವೀ ವೈದ್ಯ , ಶಸ್ತ್ರ ಚಿಕಿತ್ಸಕ ಮತ್ತು ಮಿಶ್ರಪದ್ಧತಿ ತಜ್ಞ ಡಾ ಸುರೇಶ ನೆಗಳಗುಳಿ ಇವರು ಇಲ್ಲಿ ಸಲಹೆಗೆ ಲಭ್ಯರಿದ್ದು ಅರ್ಹ ರೋಗಿಗಳು ಸಂಪರ್ಕಿಸ ಬಹುದಾಗಿದೆ.‌

ಮೂಲವ್ಯಾಧಿ ,ಚರ್ಮರೋಗ ಮುಂತಾದ ಕಾಯಿಲೆಗಳಿಗೆ ಕ್ಷಾರ ಚಿಕಿತ್ಸೆ,ಶಸ್ತ್ರಚಿಕಿತ್ಸೆ ಹಾಗೂ ಇತರ ಎಲ್ಲಾ ಕಾಯಿಕೆಗಳಿಗೆ ಮಿಶ್ರ ಪದ್ಧತಿಯ ಚಿಕಿತ್ಸೆ ಇಲ್ಲಿ ನೀಡಲಾಗುವುದು ಎಂದು ಆಸ್ಪತ್ರೆಯ ಮುಖ್ಯಸ್ಥರು ತಮ್ಮ‌ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.