ಮಂಗಳೂರು: ಭಾರತೀಯ ಜನತಾ ಪಾರ್ಟಿ ನರೇಂದ್ರ ಮೋದಿಯನ್ನು ವಿಶ್ವ ಗುರು ಮಾಡುವ ಭರಾಟೆಯಲ್ಲಿ ಈ ದೇಶಕ್ಕಾಗಿ ಶ್ರೆಯೋಭಿವೃದ್ಧಿಗಾಗಿ ಹೋರಾಟಿಡದ ದಾರ್ಶನಿಕರು, ಸಾಹಿತಿಗಳು, ಆಧ್ಯಾತ್ಮಿಕ ಗುರುಗಳು ಮತ್ತು ಹೋರಾಟಗಾರರಿಗೆ ಅವಮಾನ ಮಾಡುತ್ತಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ವಿಧಾಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.
ಅವರು ಜ.26 ಗಣರಾಜ್ಯೋತ್ಸವ ದಿನದಂದು ನಡೆಯಲಿರುವ ನಾರಾಯಣ ಗುರು ಸ್ವಾಭಿಮಾನ ಯಾತ್ರೆಗೆ ಸಂಬಂಧಿಸಿ ಇಂದು ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾನಡಿದರು.
ಬಿಲ್ಲವ ಸಮಾಜದ ಬೀಷ್ಮಚಾರ್ಯಯರಾದ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಅವರು ಕರೆ ನೀಡಿರುವ ಸ್ವಾಭಿಮಾನ ಯಾತ್ರೆಯಲ್ಲಿ ಸಮಸ್ತ ನಾರಾಯಣಗುರುಗಳ ಅನುಯಾಯಿಗಳು ಭಾಗವಹಿಸಬೇಕು ಎಂದು ಹರಿಪ್ರಸಾದ್ ಕರೆ ನೀಡಿದರು.
ಕೇರಳ ರಾಜ್ಯದ ನಾರಾಯಣ ಗುರುಗಳು, ತಮಿಳುನಾಡಿನ ಮಹಾಕವಿ ಭಾರತೀಯರ್ (ಸುಬ್ರಹ್ಮಣ್ಯ ಭಾರತಿ), ಈಸ್ಟ್ ಇಂಡಿಯಾ ಕಂಪೆನಿ ವಿರುದ್ಧ ಹೋರಾಡಿದ ವೀರ ಪಾಂಡ್ಯ ಕಟ್ಟ ಬೊಮ್ಮನ್, ವೀರ ತಾಯಿ ವೇಲುನಾಚಿಯರ್, ವಿಓ ಚಿದಂಬರನರ್ ಅವರ ಪ್ರತಿಮೆ ಇರುವ ಸ್ತಬ್ಧಚಿತ್ರಗಳನ್ನು ಕೇಂದ್ರ ಬಿಜೆಪಿ ಸರಕಾರ ತಿರಸ್ಕರಿಸಿದೆ. ಇವರೆಲ್ಲ ರೂತಮ್ಮದೇ ರೀತಿಯಲ್ಲಿ ದೇಶಕ್ಕಾಗಿ ಹೋರಾಟ ಮಾಡಿದವರು. ಇಂತಹವರ ಸ್ತಬ್ಧಚಿತ್ರಗಳನ್ನು ಗಣ ರಾಜ್ಯೋತ್ಸವ ಪರೇಡಿನಲ್ಲಿ ಭಾಗವಹಿಸಲು ಅವಕಾಶ ನೀಡದೆ ಅಗೌರವ ಅವಮಾನ ಮಾಡಲಾಗಿದೆ. ಇಂತಹ ಹೋರಟಗಾರರು ದಾರ್ಶನಿಕರು ಸಾಹಿತಗಳ ಕೆಲಸದಿಂದಾಗಿ ಇಂದು ಕೇರಳ ತಮಿಳುನಾಡಿನಂತಹ ರಾಜ್ಯಗಳಲ್ಲಿ ಭಾರತೀಯ ಜನತಾ ಪಾರ್ಟಿಯ ರಾಜಕೀಯ ಆಟ ನಡೆಯುತ್ತಿಲ್ಲ. ಕೇರಳದಲ್ಲಿ ನಾರಾಯಣ ಗುರುಗಳ ಸಂದೇಶಗಳಿಂದಾಗಿ ಬಿಜೆಪಿಗೆ ಅಲ್ಲ ರಾಜಕೀಯ ಮಾಡಲು ಆಗುತ್ತಿಲ್ಲ. ಅಲ್ಲಿಯ ಜನರು ಹೆಚ್ಚು ಶಿಕ್ಷಿತರಾಗಿದ್ದಾರೆ. ವಂಚಕರ ಬಗ್ಗೆ ಅವರಿಗ ಅರಿವಿದೆ. ಎಂದವರು ಹೇಳಿದರು.
ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ. ಕುಮಾರ್ ಸ್ವಾಮಿ ಅವರೇ ಕೇಂದ್ರ ಸರಕಾರ ನಡೆಯ ಬಗ್ಗೆ ಪ್ರಶ್ನೆ ಮಾಡಬೇಕಾಗಿರಲಿಲ್ಲ. ರಾಜ್ಯದ ಬಿಜೆಪಿ ಮುಖಂಡರು ಈ ಬಗ್ಗೆ ಕೇಂದ್ರ ಸರಕಾರವನ್ನು ಪ್ರಶ್ನೆ ಮಾಡಿ, ಆಗಿರುವ ತಪ್ಪನ್ನು ಸರಿಪಡಿಸಬಹುದಿತ್ತು. ನಾರಾಯಣ ಗುರುಗಳ ಬಗ್ಗೆ ಮಾತನಾಡುವ ನೈತಿಕ ಹಕ್ಕು ಸಿದ್ದರಾಮಯ್ಯ ಅವರಿಗಿದೆ. ಏಕೆಂದರೆ, ಸಿದ್ದರಾಮಯ್ಯ ಸರಕಾರದ ಸಂದರ್ಭದಲ್ಲೇ ನಾರಯಣ ಗುರುಗಳ ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗ ಚರಿಸಲು ನಿಱದ್ರಿಸಲಾಗದಿತ್ತು ಮತ್ತು ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಾರಾಯಣ ಗುರು ಅಧ್ಯಯನ ಕೇಂದ್ರ ಸ್ಥಾಪಿಸ ಅನುದಾನ ನೀಡಿದ್ದರು. ತಾನು ಕೂಡ 50 ಲಕ್ಷ ರೂಪಾಯಿ ಅನುದಾನ ನೀಡಿದ್ದೆ. ಬಿಜೆಪಿ ಸರಕಾರ ಎಷ್ಟು ಅನುದಾನ ನೀಡಿದೆ ಎಂದವರು ಪ್ರಶ್ನಿಸಿದರು.
ನಾರಾಯಣ ಗುರುಗಳ ಅನುಯಾಯಿಗಳನ್ನೆ ಕಾಲಾಳು ಮಾಡಿ ಚುನಾವಣೆ ಗೆಲ್ಲುವ ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ಯಾಕೆ ಸ್ತಬ್ಧ ಚಿತ್ರತಿರಸ್ಕರಿಸುವ ಬಗ್ಗೆ ಮಾತನಾಡುತ್ತಿಲ್ಲ. ಯಾಕೆ ತಿರಸ್ಕರಿಸಲಾಯಿತು ಎಂದು ಬಿಜೆಪಿ ರಾಜ್ಯಾಧ್ಕ್ಷರಾಗಲಿ, ಬಿಜೆಪಿ ಮುಖ್ಯಮಂತ್ರಿಯಾಗಲಿ ವಿವರಣೆ ನೀಡಲಿ ಎಂದು ಹರಿಪ್ರಸಾದ್ ಸವಾಲು ಹಾಕಿದರು.
ಈ ಹಿಂದ ಇದೇ ಬಿಜೆಪಿ ಸರಕಾರ ಟಿಪ್ಪು ಸುಲ್ತಾನ್ ಅವರ ಸ್ತಬ್ಧ ಚಿತ್ರಕ್ಕೆ ಅನುಮತಿ ನೀಡಿತ್ತು. ಇಂದು ನಾರಾಯಣ ಗುರುಗಳ ಸ್ತಬ್ಧ ಚಿತ್ರ ತಿರಸ್ಕರಿಸಿ ಇಬ್ಬಗೆ ನೀತಿ ಯಾಕೆ ಅನುಸರಿಸುತ್ತಿದೆ ಎಂದವರು ಪ್ರಶ್ನಿಸಿದರು.
ಬಿಜೆಪಿ ಪರವಾಗಿ ಹೇಳಿಕೆ ನೀಡುತ್ತಿರುವ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ನಾರಾಯಣ ಗುರುಗಳ ಅನುಯಾಯಿ. ಮತ್ತೊಬ್ಬ ಸಚಿವ ಸುನೀಲ್ ಕುಮಾರ್ ನಾರಾಯಣ ಗುರುಗಳಿಗೆ ಸಂಬಂಧಿಸಿ ಯಾಕೆ ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ನಾರಾಯಣ ಗುರುಗಳ ಬಗ್ಗೆ ಮಾತನಾಡುವ ಯಾವ ನೈತಿಕ ಹಕ್ಕಿದೆ ಎಂದು ಹರಿಪ್ರಸಾದ್ ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಶಾಸಕ ಯು.ಟಿ.ಖಾದರ್, ಎಐಸಿಸಿ ಕಾರ್ಯದರ್ಶಿ ಐವನ್ ಡಿ ಸೋಜ. ಮಾಜಿ ಸಚಿವ ಶಾಸಕ ಯು.ಟಿ.ಖಾದರ್, ಮಾಜಿ ಶಾಸಕ ಮೊಯ್ದೀನ್ ಬಾವಾ, ಮಾಜಿ ರಾಜ್ಯಸಭಾ ಸದಸ್ಯ ಬಿ. ಇಬ್ರಾಹಿಂ, ಕಾಂಗ್ರೆಸ್ ಮುಖಂಡರಾದ ಗಣೇಶ್ ಪೂಜಾರಿ, ರಕ್ಷಿತ್ ಶಿವರಾಂ, ಓಬಿಸಿ ಘಟಕದ ಜಿಲ್ಲಾ ಅಧ್ಯಕ್ಷ ವಿಶ್ವಾಸ್ ದಾಸ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಪುರುಷೋತ್ತಮ ಚಿತ್ರಾಪುರ, ಕೋಡಿಚಾಲ್ ಇಬ್ರಾಹಿಂ, ಶಶಿಧರ ಹೆಗ್ಡೆ, ಅಬ್ದುಲ್ ರವೂಫ್ ಉಪಸ್ಥಿತರಿದ್ದರು.