ಕೇರಳ: ಕೇರಳ ಹಿರಿಯ ನಾಗರಿಕರ ವೇದಿಕೆ ಬದಿಯಡ್ಕ ಘಟಕದ ಸಹಯೋಗದಲ್ಲಿ ಡಾ. ವಾಣಿಶ್ರೀ ಕಾಸರಗೋಡು ಗಡಿನಾಡ ಕನ್ನಡತಿ ಇವರ ಸಾರಥ್ಯದಲ್ಲಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಇವರ ವತಿಯಿಂದ  ಹಗಲುಮನೆ ಬೋಳುಕಟ್ಟೆ ಬದಿಯಡ್ಕ ಇಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಜರುಗಿತು. 

ಶ್ರೀನಿಧಿ ಸರಳಾಯ ವೈದ್ಯರು ಸಾಹಿತಿಗಳು ಬದಿಯಡ್ಕ ಇವರು ದೀಪ ಬೆಳಗುವುದರ ಮೂಲಕ ಉದ್ಘಾಟನೆ ಮಾಡಿದರು. ಬದಿಯಡ್ಕ ಗ್ರಾಮದ ಅದ್ಯಕ್ಷರಾದ ಶಾಂತ ಬರಡ್ಕ ಅಧ್ಯಕ್ಷತೆಯನ್ನು ವಹಿಸಿದರು. ಪಿಳಿಂಗಲ್  ಕೃಷ್ಣ ಭಟ್ ಇವರು ಮುಖ್ಯ ಅತಿ ಥಿ ಯಾಗಿ ಪಾಲ್ಗೊಂಡರು. ಗೌರವ ಉಪಸ್ಥಿತಿಯಾಗಿ ಬಾಲಕೃಷ್ಣ ಶೆಟ್ಟಿ ವಾರ್ಡ್ ಮೆಂಬರ್ ಬದಿಯಡ್ಕ ಪಂಚಾಯತ್ ಇದ್ದರು.

ಶಂಕರನಾರಾಯಣ ಭಟ್ ಸಂಪತ್ತಿಲ ಕಾರ್ಯದರ್ಶಿ ಹಿರಿಯ ನಾಗರಿಕರ ವೇದಿಕೆ ಬದಿಯಡ್ಕ ಘಟಕ ಇವರು ಸ್ವಾಗತಿಸಿದರು. ಡಾ. ವಾಣಿಶ್ರೀ ಕಾಸರಗೋಡು ಇವರು ಆಯುರ್ವೇದದಿಂದಲೇ ಆರೋಗ್ಯ. ಆಯುರ್ವೇದ ಮನುಕುಲದ ಪುರಾತನ ವೈದ್ಯ ಪದ್ಧತಿ. ಆಯುರ್ವೇದ ಎಲ್ಲಾ ಕಾಲಕ್ಕೂ ಭರವಸೆಯ ಔಷದ. ಎಂದು ಮಾತನಾಡುತ್ತಾ ಕಾರ್ಯಕ್ರಮದ ಸಂಪೂರ್ಣ ನಿರೂಪಣೆಗೈದರು. 

ಗುರುರಾಜ್ ಕಾಸರಗೋಡು ಇವರು ಧನ್ಯವಾದ ಗೈದರು. ಸಂಘದ ಕೋಶಾಧಿಕಾರಿ ಡಾ. ವೆಂಕಟ ಗಿರೀಶ್,ಉಪಾಧ್ಯಕ್ಷರು ಶ್ಚ್ಯುತ ಭಟ್ ಪೊಟ್ಟಿಪ್ಪಲ, ಉಪಸ್ಥಿತರಿದ್ದರು.

ಕೇರಳ ಹಿರಿಯ ನಾಗರಿಕರ ವೇದಿಕೆ ಬದಿಯಡ್ಕ ಘಟಕದ ಅಧ್ಯಕ್ಷರು ಪೆರ್ಮುಖ  ಈಶ್ವರ ಭಟ್ ಇವರು ಕಾರ್ಯಕ್ರಮ ನಡೆಸಲು ಅನುವು ಮಾಡಿ ಕೊಟ್ಟರು.