ಕಿನ್ನಿಗೋಳಿ: ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಟೀಲು ಸಮೀಪದ ಬಲ್ಲಾಣದಲ್ಲಿ ಕಿನ್ನಿಗೋಳಿ ಮತ್ತು ಬಜಪೆ ಪಟ್ಟಣ ಪಂಚಾಯತ್ ಜಂಟಿಯಾಗಿ ನಿರ್ಮಾಣವಾಗುವ ಘನ ತ್ಯಾಜ್ಯ ಘಟಕಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದ್ದು ಮಂಗಳವಾರ ಅಧಿಕಾರಿಗಳ ಮತ್ತು ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆಯಿತು.
ಸೋಮವಾರ ಸದ್ರಿ ಜಮೀನಿನಲ್ಲಿ ಘನ ತ್ಯಾಜ್ಯ ಘಟಕಕ್ಕೆ ಸರ್ವೆ ಕಾರ್ಯ ನಡೆಯುತ್ತಿದ್ದು ಇದನರಿತ ಸ್ಥಳೀಯರು ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದು ಯಾವುದೇ ಕಾರಣಕ್ಕೂ ತ್ಯಾಜ್ಯ ಘಟಕ ನಿರ್ಮಣಕ್ಕೆ ಬಿಡುವುದಿಲ್ಲ ಎಂದಿದ್ದರು. ಮಂಗಳವಾರ ಶಾಸಕ ಉಮಾನಾಥ ಕೋಟ್ಯಾನ್ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಧಿಕಾರಿ ನಾಗರಾಜ್ ಮತ್ತು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು ಈ ಸಂದರ್ಭ ಸ್ಥಳೀಯರ ಮತ್ತು ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು, ಯಾವುದೇ ರೀತಿಯ ತ್ಯಾಜ್ಯ ಘಟಕಕ್ಕೆ ಅವಕಾಶ ನೀಡಬಾರದು ಎಂದು ಸ್ಥಳೀಯರು ಶಾಸಕರಿಗೆ ಮನವಿ ನೀಡಿದರು. ಈ ಬಗ್ಗೆ ಅಧಿಕಾರಿಗಳಿಗೆ ಈ ಜಮೀನನ್ನು ರದ್ದು ಪಡಿಸಬೇಕೆಂದು ಸೂಚಿಸಿದ್ದು, ಯಾರು ಈ ಜಮೀನನ್ನು ಅತಿಕ್ರಮಣ ಮಾಡಿದ್ದಾರೆ ಅದನ್ನು ವಶಕ್ಕೆ ಪಡೇಯಬೇಕು. ಈ ಬಗ್ಗೆ ತಹಶೀಲ್ದಾರ್ ಅವರಿಗೆ ಆದೇಶ ನೀಡಲಾಗುದು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಪ್ರಸ್ತುತ ಬಲ್ಲಾಣದಲ್ಲಿ ಎಷ್ಟು ಜಾಗ ತ್ಯಾಜ್ಯ ಘಟಕಕ್ಕೆ ಮೀಸಲಿರಿಸಿದ್ದು??
ಕಟೀಲು ಸಮೀಪದ ಬಲ್ಲಾಣದಲ್ಲಿ ಸುಮಾರು 19 ಎಕರೆ ಜಮೀನಿನಲ್ಲಿ 7 ಎಕರೆ ಜಮೀನು ತ್ಯಾಜ್ಯ ಘಟಕಕ್ಕೆ ಮೀಸಲಿರಿಸಿದ್ದು ಸರ್ವೆ ಕಾರ್ಯ ಪ್ರಾರಂಭಿಸಲಾಗಿತ್ತು, ಬಜಪೆ ಪಟ್ಟಣ ಪಂಚಾಯತ್ ಗೆ ತ್ಯಾಜ್ಯ ಘಟಕ ಅನಿವಾರ್ಯವಾಗಿದೆ
ಪ್ರಸ್ತುತ ಕಿನ್ನಿಗೋಳಿಯಲ್ಲಿ ತ್ಯಾಜ್ಯ ಘಟಕ ಇಲ್ಲವೇ?
ಕಿನ್ನಿಗೋಳಿಯಲ್ಲಿ ಪ್ರಸ್ತುತ ಒಂದು ಎಕ್ಕರೆ ಪ್ರದೇಶದಲ್ಲಿ ಒಂದು ತ್ಯಾಜ್ಯ ಘಟಕ ಇದ್ದು, ಭವಿಷ್ಯದ ಯೋಚನೆ ಯೋಜನೆಯಿಂದ, ಪಟ್ಟಣ ಪಂಚಾಯತ್ ನಿಂದ ಈ ಹಿಂದಿನ ಮುಖ್ಯಾಧಿಕಾರಿಯಾಗಿದ್ದ ಸಾಹಿಷ್ ಚೌಟ ಅವರು ಪಟ್ಟಣ ಪಂಚಾಯತ್ ವ್ಯಾಪ್ತಿಯ ನರ್ತಿಕಲ್ ನಲ್ಲಿ ಸುಮಾರು 2 ಎಕರೆ ಜಮೀನು ಗುರುತಿಸಿ ಅದನ್ನು ಘನ ತ್ಯಾಜ್ಯಕ್ಕೆ ಮೀಸಲಿರಿಸಿ ಇಲ್ಲಿನ ಕಾಮಗಾರಿಗೆ ಗುದ್ದಲಿ ಪೂಜೆಯೂ ನಡೆದಿತ್ತು.
ಕಿನ್ನಿಗೋಳಿಯಲ್ಲಿ ಇರುವ ಪ್ರಸ್ತುತ ಘನತ್ಯಾಜ್ಯ ಘಟಕ ಎಷ್ಟು ವರ್ಷಕ್ಕೆ ಸೀಮಿತ??
ಕಿನ್ನಿಗೋಳಿ ಪಟ್ಟಣ ಪಂಚಾಯತ್ ನಲ್ಲಿ ಪ್ರಸ್ತುತ ಎರಡು ಕಡೆಗಳಲ್ಲಿ ತ್ಯಾಜ್ಯ ನಿರ್ವಹಣೆಗೆ ಅವಕಾಶವಿದ್ದು ಮುಂದಿನ ಸುಮಾರು 50 ವರ್ಷಕ್ಕಾಗುವಷ್ಟು ತ್ಯಾಜ್ಯ ನಿರ್ವಹಣೆಗೆ ಈ ಜಮೀನು ಸಾಕಾಗಬಹುದಾಗಿದೆ.
ಬಜಪೆ ಪಟ್ಟಣ ಪಂಚಾಯಿತಿನಲ್ಲಿ ಘನ ತ್ಯಾಜ್ಯ ಘಟಕಕ್ಕೆ ಜಮೀನ್ ಇಲ್ಲವೇ??
ಬಜಪೆ ಪಟ್ಟಣಪಂಚಾಯತ್ ನ ತ್ಯಾಜ್ಯ ಘಟಕ್ಕೆ ಈ ಹಿಂದೆ ಗ್ರಾಮ ಪಂಚಾಯತ್ ಇರುವಾಗಲೇ ಎರಡು ಮೂರು ಕಡೆಗಳಲ್ಲಿ ಜಮೀನು ಗುರುತಿಸಿದ್ದು ಆದರೆ ಅಲ್ಲಿನ ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು, ಬಜಪೆಯ ತ್ಯಾಜ್ಯ ಘಟಕ್ಕಕ್ಕೆ ಅಲ್ಲಿನ ಜನರಿಂದಲೇ ವಿರೋಧ ವ್ಯಕ್ತವಾಗುವಾಗ ಅದನ್ನು ಕಿನ್ನಿಗೋಳಿ ಹೇಗೆ ತರುತ್ತೀರಿ ಎಂಬುವುದು ಕಿನ್ನಿಗೋಳಿ ವ್ಯಪ್ತಿಯ ಜನರ ಪ್ರಶ್ನೆಯಾಗಿದೆ