ಕೊಡಿಯಾಲ್ ಬೈಲ್ ಪ್ರದೇಶದಲ್ಲಿ  ಸ್ಮಾರ್ಟ್ ಸಿಟಿಯ ಕಾಮಾಗಾರಿ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಕಳೆದ 3 ತಿಂಗಳುಗಳಿಂದ ಅನೇಕ ಮನೆ, ಅಂಗಡಿಗಳ ಮಧ್ಯೆದಲ್ಲಿಯೇ  ಕೆಲಸ ನಡೆಯುತ್ತಿರುವುದರಿಂದ, ಸ್ಥಳೀಯ ಮನೆಗಳಿಗೆ ಹೋಗುವ ದಾರಿ, ವಿದ್ಯುತ್, ನೀರು ಇನ್ನಿತರ ಸಮಸ್ಯೆಗಳಿಂದ ಕೂಡಿದ್ದರೂ, ಜೊತೆಯಲ್ಲಿ ವಿಪರೀತ ಬಿಸಿಲಿನ ಮಧ್ಯೆ  ಧೂಳು ಮನೆಗಳಿಗೆ ನುಗ್ಗಿ ಅಶಾಂತಿ ವಾತವರಣ ಉಂಟಾಗಿರುವುದು ಮಾತ್ರವಲ್ಲದೇ ರೋಗಕ್ಕೆ ಬಲಿಯಾಗುವ ಎಲ್ಲಾ ಲಕ್ಷಣಗಳು ಇರುವುದರಿಂದ ಸ್ಥಳೀಯರ ಕೋರಿಕೆಯ ಮೇರೆಗೆ ಮಾಜಿ ಶಾಸಕ, ಎಐಸಿಸಿ ಕಾರ್ಯದರ್ಶಿ ಶ್ರೀ ಐವನ್ ಡಿ ಸೋಜರವರು ಜೈಲ್ ರೋಡಿನ ಬಿಷಪ್ ಕಂಪೌಂಡಿನ ಸುತ್ತಮುತ್ತಲ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿ ಆಗುವ ತೊಂದರೆಗಳನ್ನು ವೀಕ್ಷಿಸಿ, ಮಂಗಳೂರು ಮಹಾನಗರ ಪಾಲಿಕೆ ಕಮಿಷನರ್ ಮತ್ತು ಸ್ಮಾರ್ಟ್ ಸಿಟಿ ಇಂಜಿನಿಯರಿಗೆ ಕರೆಮಾಡಿ ಕೂಡಲೇ ಶೀಘ್ರದಲ್ಲಿಯೇ ಕಾಮಾಗಾರಿಗಳನ್ನು ಮುಗಿಸಿ, ದಿನನಿತ್ಯದ ಜೀವನಕ್ಕೆ ತೊಂದರೆಯಾಗದಂತೆ ದಾರಿ ಮತ್ತು ನೀರು ಕಲ್ಪಿಸಿಕೊಡಬೇಕು ಮತ್ತು ಧೂಳು ಮನೆಗಳಿಗೆ ನುಗ್ಗುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದ್ದು, ಈ ಬಗ್ಗೆಯೂ ಕಾಮಾಗಾರಿ ನಡೆಯುವ ಸಂದರ್ಭದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಮುಂತಾದ ಸಮಸ್ಯೆಗಳನ್ನು ವಿವರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ನಗರ ಪಾಲಿಕೆ ಆಯುಕ್ತರು, ಸ್ಮಾರ್ಟ್ ಸಿಟಿ ಇಂಜಿನಿಯರ್ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆಗಳನ್ನು ಪರಿಶೀಲನೆ ಮಾಡಿ ಪರಿಹಾರ ಒದಗಿಸುವರು ಎಂದು ಭರವಸೆ ನೀಡಿದರು.  

 ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು ಮತ್ತು  ಅವರ ಸಮಸ್ಯೆಗಳನ್ನು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಕಾಪೆರ್Çೀರೇಟರ್ ಭಾಸ್ಕರ್ ರಾವ್, ಆನಂದ ಸೋನ್ಸ್, ಆಲಿಸ್ಟನ್ ಡಿಕುನ್ಹಾ, ಮುಂತಾದವರು  ಮಾಜಿ ಶಾಸಕರೊಂದಿಗೆ ಉಪಸ್ಥಿತರಿದ್ದರು.