ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಮನುಕುಲದ ಹೆಮ್ಮಾರಿಯಾಗಿ ಕಾಡಿದ, ಜನರ ನಡುವೆ ಅಂತರ ತಂದೊಡ್ಡಿದ ಕೋವಿಡ್ ಸಂದರ್ಭದಲ್ಲೂ ಎಲ್ಲರ ಸಹಾಯಕ್ಕೊದಗಿದ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಆರೋಗ್ಯದ ಮಾಹಿತಿಯೊಂದಿಗೆ, ಉಚಿತ ತಪಾಸಣೆ, ಪರಿಹಾರ ಒದಗಿಸುವುದು ಅತ್ಯಂತ ಸ್ತುತ್ಯಾರ್ಹ. ಮೂಡುಬಿದಿರೆ ಹಾಗೂ ಪರಿಸರದ ಎಲ್ಲಾ ಊರುಗಳ ಅಭಿವೃದ್ಧಿ ಗೈದ ಅಮರನಾಥ ಶೆಟ್ಟಿಯವರ ಹೆಸರಿನಲ್ಲಿ ಮಾಡುವ ಈ ಕಾರ್ಯ ಅತ್ಯಂತ ಪ್ರಶಂಸನೀಯ ಎಂದು ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಿಟ್ಟೆ ಸಂಸ್ಥೆಯ ಪ್ರೊ ಛಾನ್ಸಲರ್ ಡಾ.ಎಂ.ಶಾಂತಾರಾಮ ಶೆಟ್ಟಿ ಮಾತನಾಡಿ ಮಾನವ ಕುಲದ ಮಹಾ ಮಾರಿ ಕ್ಯಾನ್ಸರ್ ತಪಾಸಣೆ, ಆರೋಗ್ಯ ಮಾಹಿತಿ ಪ್ರತಿಯೊಬ್ಬರಿಗೂ ದೊರಕ ಬೇಕು. ಜನರಿಗಾಗಿ ದುಡಿದ ಅಮರನಾಥ ಶೆಟ್ಟಿಯವರ ಆತ್ಮಕ್ಕೆ ಇಂತಹ ಕಾರ್ಯಗಳಿಂದ ಶಾಂತಿ ದೊರೆಯಲಿದೆ ಎಂದರು.
ವೇದಿಕೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ಡಾ ಮೋಹನ್ ಆಳ್ವ, ಮಾಜಿ ಸಚಿವ ಅಭಯ ಚಂದ್ರ ಜೈನ್, ಅದಾನಿ ಗ್ರೂಪ್ ನ ಕಿಶೋರ್ ಆಳ್ವ, ಧನಲಕ್ಷ್ಮಿ ಕ್ಯಾಶ್ಯೂ ನ ಶ್ರೀಪತಿ ಭಟ್, ಲಕ್ಷ್ಮಿ ಶಿಕ್ಷಣ ಟ್ರಸ್ಟ್ ನ ಪ್ರಶಾಂತ್ ಶೆಟ್ಟಿ, ಟ್ರಸ್ಟ್ ನ ಜಯಶ್ರೀ ಅಮರನಾಥ ಶೆಟ್ಟಿ, ಡಾ.ಅಮರಶ್ರೀ , ಆಶ್ರಿತ ಶೆಟ್ಟಿ ಉಪಸ್ಥಿತರಿದ್ದರು.