ಫೆಬ್ರವರಿ 10ರಂದು ನಡೆಯುವ ಪಕ್ಷದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಆರ್‌ಜೆಡಿ- ರಾಷ್ಟ್ರೀಯ ಜನತಾ ದಳ ಪಕ್ಷದ ಅಧ್ಯಕ್ಷತೆ ಬಿಡುವುದಾಗಿ ಜಾಲ ತಾಣಗಳಲ್ಲಿ ಬರುತ್ತಿರುವುದು ಸುಳ್ಳು ಸುದ್ದಿ ಎಂದು ಬಿಹಾರದ ಮಾಜೀ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಹೇಳಿದರು.

ತೇಜಸ್ವಿ ಯಾದವ್ ಸದ್ಯ ‌ವಿಧಾನ ಸಭೆಯಲ್ಲಿ ಪ್ರತಿಪಕ್ಷದ ನಾಯಕನಾಗಿದ್ದು ತನ್ನ ಜವಾಬ್ದಾರಿ ನಿಬಾಯಿಸುತ್ತಿದ್ದಾನೆ. ಆರ್‌ಜೆಡಿ ಅಧ್ಯಕ್ಷತೆ ಈಗಲೆ ಆತನ ತಲೆಗೆ ಹೊರಿಸುವ ಅಗತ್ಯವಿಲ್ಲ ಎಂದು ಲಾಲೂ ತಿಳಿಸಿದರು.