ಹಿಂದಿ ಮತ್ತು ಭಾರತೀಯ ಚಿತ್ರರಂಗದಲ್ಲಿ ಗಾನ ಕೋಗಿಲೆ ಎಂದೇ ಹೆಸರಾಗಿರುವ ಲತಾ ಮಂಗೇಶ್ಕರ್ ಅವರು ಫೆಬ್ರವರಿ 6ರಂದು ಮುಂಬಯಿಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು.
92 ವರುಷದ ಅವರನ್ನು ವಯೋಸಹಜ ಕಾಯಿಲೆಯ ಕಾರಣ ಜನವರಿ 8ರಂದು ಆಸ್ಪತ್ರೆಗೆ ಸೇರಿಸಲಾಗಿತ್ತು. ಬಹು ಅಂಗ ವೈಫಲ್ಯದಿಂದ ಅವರು ಕೊನೆಯುಸಿರೆಳೆದರು.
25,000ಕ್ಕೂ ಹೆಚ್ಚು ಹಾಡು ಹಾಡಿರುವ ಅವರು ಕನ್ನಡದಲ್ಲಿ 1964ರ ಸಂಗೊಳ್ಳಿ ರಾಯಣ್ಣ ಚಿತ್ರಕ್ಕೆ ಬೆಳ್ಳನೆ ಬೆಳಗಾಯಿತು ಹಾಡು ಹಾಡಿದ್ದಾರೆ. ಎಲ್ಲ ಭಾಷೆಗಳಲ್ಲೂ ಬೆರಳೆಣಿಕೆಯ ಹಾಡು ಹಾಡಿರುವ ಅವರು ಹಿಂದಿ ಚಿತ್ರಗಳಲ್ಲಿ 7 ದಶಕಗಳ ಕಾಲ ಹಾಡಿದ್ದಾರೆ. ಅವರಿಗೆ 2001ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಲಾಗಿದ್ದು, ನೂರಾರು ಪ್ರಶಸ್ತಿ ಪಡೆದವರೂ ಆಗಿದ್ದಾರೆ.