ಬಾಂಬೆ ಹೈಕೋರ್ಟ್ ವಕೀಲೆ ನೀಲಾ ಗೋಖಲೆಯವರನ್ನು ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ನ್ಯಾಯಾಧೀಶೆ ಆಗಲು ಶಿಫಾರಸು ಮಾಡಿದೆ.

ಇದು ಇನ್ನು ಒಕ್ಕೂಟ ಸರಕಾರದ ಕಾನೂನು ಮತ್ತು ನ್ಯಾಯಾಂಗ ಸಚಿವಾಲಯದ ಮುದ್ರೆ ಪಡೆಯಬೇಕಷ್ಟೆ.

Image Credit: The Hindu

6 ಸಾವು, 101 ಜನರು ಗಾಯಗೊಂಡ ಮಾಲೆಗಾಂವ್ ಸ್ಫೋಟ ನಡೆಸಿದ ಮುಖ್ಯ ಆರೋಪಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಪರ ಹಾಜರಾದ ವಕೀಲೆ ನೀಲಾ.

ನೀಲಾರು ಕೋಮು ಸೂಕ್ಷ್ಮದ ಪುಣೆಯಲ್ಲಿ ಹುಟ್ಟಿದವರು; ಮಾಲೆಗಾಂವ್ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಇನ್ನೊಂದು ಕೋಮು ಸೂಕ್ಷ್ಮ ಪ್ರದೇಶವಾಗಿದೆ. ನೀಲಾ ಅವರು ಎಲ್‌ಎಲ್‌ಬಿ ಮತ್ತು ಎಲ್‌ಎಲ್ಎಂ ಪೂನಾದಲ್ಲಿ ಮಾಡಿದರೆ ಲಾ ಡಾಕ್ಟರೇಟನ್ನು ಇನ್ನೊಂದು ಸೂಕ್ಷ್ಮ ಪ್ರದೇಶ ಉತ್ತರ ಪ್ರದೇಶದ ಜಾನ್ಸಿಯ ಬುಂದೇಲಖಂಡ ವಿಶ್ವವಿದ್ಯಾನಿಲಯದಲ್ಲಿ ಮಾಡಿದರು.

ಈಗ ನೀಲಾ ಗೋಖಲೆಯವರು ಪುರೋಹಿತ್ ಪ್ರಕರಣದಿಂದ ಹಿಂದೆಗೆಯುವಾಗಲೂ ಪುರೋಹಿತರ ಅಪರಾಧ ಸರಕಾರಿ ಸೇವೆಯವರ ಪ್ರಕಾರ ನಿರೂಪಿತವಾಗಿಲ್ಲ ಎಂದು ಉಚ್ಚ ನ್ಯಾಯಾಲಯಕ್ಕೆ ಬಿಡುಗಡೆ ಪತ್ರ ನೀಡಿದ್ದಾರೆ.