ನಿವೃತ್ತ ಇಂಗ್ಲಿಷ್ ಪ್ರೊಫೆಸರ್, ಸಾಹಿತಿ, ಹೋರಾಟಗಾರ ಚಂಪಾ ಎಂದೇ ಹೆಸರಾದ ಚಂದ್ರಶೇಖರ ಪಾಟೀಲ ಅವರು ತನ್ನ 83ನೇ ಪ್ರಾಯದಲ್ಲಿ ಬೆಂಗಳೂರಿನಲ್ಲಿ ನಿಧನರಾದರು.
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಹತ್ತೀಮುತ್ತೂರು ಅವರ ಹುಟ್ಟೂರು. ಊರು ಮತ್ತು ಧಾರವಾಡದಲ್ಲಿ ಶಿಕ್ಷಣ ಮುಗಿಸಿದ ಅವರು ಇಂಗ್ಲೆಂಡಿನ ಲೀಡ್ಸ್‌ನಲ್ಲಿ ಸ್ಕಾಲರ್ಶಿಪ್ ಪಡೆದು ಡಿಲಿಟ್ ಮಾಡಿದರು. ಧಾರವಾಡದಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿದ್ದು ನಿವೃತ್ತಿಯ ಬಳಿಕ ಬೆಂಗಳೂರಿನಲ್ಲಿ ವಾಸವಿದ್ದರು.