ಹಿರಿಯ ರಾಜಕಾರಣಿ, ಅಹಿಂದ ನಾಯಕ, ಶಿಕ್ಷಣ ಪ್ರೇಮಿ ಆರ್. ಎಲ್. ಜಾಲಪ್ಪ ಅವರು ಕೋಲಾರದ ಅವರದೇ ಸಂಸ್ಥೆಗಳ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 94 ವರುಷ ಪ್ರಾಯವಾಗಿತ್ತು.
ಚಿಕ್ಕಬಳ್ಳಾಪುರ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಅವರು ಒಕ್ಕೂಟ ಸರಕಾರದಲ್ಲಿ ಮಂತ್ರಿ ಸಹ ಆಗಿದ್ದರು.
ದೇವರಾಜ ಅರಸು ಅಭಿಮಾನಿ ಆಗಿದ್ದ ಅವರು ಅರಸು ಹೆಸರಿನಲ್ಲಿ ದೊಡ್ಡಬಳ್ಳಾಪುರ ಮತ್ತು ಆ ಸುತ್ತಿನಲ್ಲಿ ಹಲವಾರು ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿದ್ದರು.