ಮಂಗಳೂರು:- ರಾಷ್ಟ್ರೀಯ ಸೇವಾ ಯೋಜನೆ, ಮಿಲಾಗ್ರಿಸ್ ಕಾಲೇಜು, ಮಂಗಳೂರು ಇದರ ವತಿಯಿಂದ ಜನವರಿ 30, 2021 ರಂದು ಹುತಾತ್ಮರ ದಿನ ಮತ್ತು ಮಹಾತ್ಮ ಗಾಂಧೀಜಿಯವರ 73ನೇ ಪುಣ್ಯ ಸ್ಮರಣೆಯನ್ನು ಆಚರಿಸಲಾಯಿತು.

ರಾ.ಸೇ.ಯೋ.ಯೋಜನಾಧಿಕಾರಿ ಡೆನ್ಜಿಲ್ ಇ. ಪಿಂಟೊರವರು ಗಾಂಧೀಜಿಯವರ ವಿಚಾರಗಳ ಬಗ್ಗೆ ಮಾತನಾಡಿದರು. ಮಹಾತ್ಮ ಗಾಂಧೀಜಿಯವರು ಒಬ್ಬ ಉತ್ತಮ ಅಂತರಾಷ್ಟ್ರೀಯ ನಾಯಕರಾಗಿದ್ದರು. ಅವರ ಎರಡು ತತ್ವಗಳಾದ ಸತ್ಯ ಮತ್ತು ಅಹಿಂಸೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿವೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ವಂ. ಫಾ. ಮೈಕಲ್ ಸಾಂತುಮಾಯೋರ್, ರಾ.ಸೇ.ಯೋ. ಸಹಯೋಜನಾಧಿಕಾರಿ  ನಮಿತಾ ಕೆ ಹಾಗೂ ರಾ.ಸೇ.ಯೋ. ಸ್ವಯಂಸೇವಕರು ಮಹಾತ್ಮ ಗಾಂಧೀಜಿಯವರಿಗೆ ನಮನ ಸಲ್ಲಿಸಿದರು.