ಮೂಡುಬಿದಿರೆ: ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿಗಳವರಿಂದ ಹೈದರಾಬಾದ್ ಕರ್ನಾಟಕ, ಗುಲ್ಬರ್ಗ ಇಂಡಿ, ಬಿಜಾಪುರ ನವಲಗುಂದ, ಹುಬ್ಬಳ್ಳಿ ಧಾರ್ಮಿಕ ಪ್ರವಾಸ ದಿನಾಂಕ 20.11.22 ರಿಂದ 3ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮೂಡುಬಿದಿರೆ ಸ್ವಾಮೀಜಿ ಭಾಗವಹಿಸಿ ಆಶೀರ್ವಾದ ನೀಡಿದರು. 

20.11.22 ರಂದು ಬೆಳಿಗ್ಗೆ ಗುಲ್ಬರ್ಗ ಜೈನ ಭಗವಾನ್ ಅದಿನಾಥ್ ಸ್ವಾಮಿ ಮಂದಿರ ದರ್ಶನ ಮಾಡಿ ಪ.ಪೂ 108 ಪ್ರಸಂಗ ಸಾಗರ್ ಮುನಿರಾಜ್ ರ ಪಿಂಚಿ ಪರಿವರ್ತನೆ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಆಶೀರ್ವಾದ ನೀಡಿ ಪಿಂಚಿ ನವಿಲು ತನ್ನ ಗರಿ ತಾನಾಗಿ ಉದುರಿಸಿದ ಗರಿಗಳ ಸಮೂಹ ಸಂಯಮದ ಉಪಕರಣವಾಗಿ ಜೀವ ರಕ್ಷಾ ಉಪಕರಣ ವಾಗಿ ಜೈನ ಸಾಧು ಸಾಧ್ವಿ ಯವರು ಉಪಯೋಗಿಸಿ ವರ್ಷ ಕ್ಕೊಮ್ಮೆ ಬದಲಾಯಿಸಿ ಅಹಿಂಸಾ ಧರ್ಮ ಪಾಲನೆ ಗೆ ಒತ್ತು ಕೊಡುವ ಮಹತ್ತ್ವದ ದಿನ ಎಂದು ನುಡಿದರು. 

ಈ ಮೊದಲು ಗುಲ್ಬರ್ಗ ಜೈನ ಸಮಾಜ ತೆರೆದ ಅಲ oಕೃತ ವಾಹನ ದಲ್ಲಿ ಪಿಂಚಿ ಹಾಗೂ ಮೂಡು ಬಿದಿರೆ ಶ್ರೀ ಗಳ ಅದ್ದೂರಿಯಾಗಿ ಶೋಭಾ ಯಾತ್ರೆಯಲ್ಲಿ ಪೂರ್ಣ ಕುಂಭ ಸ್ವಾಗತ ಮಾಡಿ ಬರಮಾಡಿಕೊಳ್ಳಲಾಯಿತು ರಾಹುಲ್ ಶಾ, ಜ್ಯೋತಿ ಕಿವಡೆ, ಗಡಗಡೆ,ವಿನೋದ್, ಭರತ್, ಡಿ. ಕೆ ಶಾ, ಬಾಹುಬಲಿ ಜೈನ್ ಉಪಸ್ಥಿತರಿದ್ದರು ಮುನಿ ಗಳ, ಭಟ್ಟಾರಕ ರ ಪಾದಪೂಜೆ ನೆರವೇರಿಸಿ ಆಶೀರ್ವಾದ ಪಡೆದರು ಬಳಿಕ ಇಂಡಿ ತೆರಳಿದ ಭಟ್ಟಾರಕ ಸ್ವಾಮೀಜಿ 21.11.22ರಂದು ಮಕ್ಕಳ ಆಸ್ಪತ್ರೆ ಭೂಮಿ ಪೂಜೆ ಯಲ್ಲಿ ಪಾಲ್ಗೊಂಡು, ಇoಡಿ ಬಸದಿ ದರ್ಶನ ಮಾಡಿದರು ಡಿ ಅರ್ ಶಾ ರಿಂದ ನಡೆಸಲ್ಪ ಡುವ ಪ್ರಾಥಮಿಕ, ಮಾಧ್ಯಮಿಕ, ಹೈ ಸ್ಕೂಲ್ ಶಿಕ್ಷಣ ಸಂಸ್ಥೆ ಭೇಟಿ ನೀಡಿ ಅಧ್ಯಕ್ಷ ಶ್ರೀ ಡಿ ಅರ್ ಶಾಹ ರನ್ನು ಗೌರವಿಸಿ ಹರಸಿ ಆಶೀರ್ವಾದ ಮಾಡಿದರುಚಂದ್ರ ಕಾಂತ್ ಪಂಡಿತ್ ಡಾ. ತನ್ಮಯ್, ಮೊದಲಾದ ವರು ಉಪಸ್ಥಿತರಿದ್ದರು. 

ಬಳಿಕ ಬಿಜಾಪುರ ಅತಿಶಯ ಕ್ಷೇತ್ರ ಸಹಸ್ರ ಪಣಿ ಪಾರ್ಶ್ವ ನಾಥ ಬಸದಿದರ್ಶನ ಮಾಡಿ ದರುಬಸದಿ ಸಮಿತಿ ಯ ಶೈಲೇಶ್, ಬಾಗೇ ವಾಡಿ ಪರಿವಾರ ಸ್ವಾಮೀಜಿ ಪಾದಪೂಜೆ ನೆರವೇರಿಸಿ ಆಶೀರ್ವಾದ ಪಡೆದರು ನಂತರ ನವಲಗುಂದ,ದಲ್ಲಿ ವಿದ್ಯಾಧರ್ ಪಾಟೀಲ್ ಶ್ರೀ ಬಾಹುಬಲಿ, ಹುಬ್ಬಳ್ಳಿ ಕುಸಗಲ್ ರಸ್ತೆ ಯಲ್ಲಿ, ರಾಜೇಂದ್ರ ಬೀಳಗಿ ಅಧ್ಯಕ್ಷರು ಜೈನ ಸಮಾಜ ಹುಬ್ಬಳ್ಳಿ, ಅಭಿನಂದನ್, ಮಹಾವೀರ ಕುಂದೂರು, ಶೀತಲ್ ಪಾಟೀಲ್,ವಿಮಲ್ ತಾಳಿಕೋಟೆ ಮೊದಲದವರು ಉಪಸ್ಥಿತರಿದ್ದು ಸ್ವಾಮೀಜಿ ಆಶೀರ್ವಾದ ಪಡೆದರು ಬಳಿಕ ಸ್ವಾಮೀಜಿ ಮೂಡುಬಿದಿರೆಗೆ ಹಿಂತಿರುಗಿದರು