ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆ: ಮೂಡುಬಿದಿರೆ ಹಾಗೂ ಕಾರ್ಕಳ ತಾಲೂಕಿನ ಗ್ರಾಮೀಣ ಪ್ರದೇಶದ ಬಡವರ, ಸಾಮಾಜಿಕ ಸಬಲೀಕರಣ, ಶಿಕ್ಷಣ, ಆರೋಗ್ಯ, ಆರೈಕೆ, ಅಭಿವೃದ್ಧಿ ಗೈಯುತ್ತಿರುವ ಸಂಘಟನೆ ಆದರ್ಶ ಗ್ರಾಮಾಭಿವೃದ್ದಿ ಸೇವಾ ಸಂಸ್ಥೆ. ಇದರ ರಜತ ಮಹೋತ್ಸವ ಕಾರ್ಯಕ್ರಮ ಡಿಸೆಂಬರ್ 19, 20, 21ರಂದು ಸಮಾಜ ಮಂದಿರದಲ್ಲಿ ನಡೆಯಲಿದೆ.
ದಿನಾಂಕ 19 ರಂದು ವಿಶೇಷ ಚೇತನರ ಸಮಾವೇಶ ಮತ್ತು ಕಲಾಮೇಳ, ಸಾಂಸ್ಕೃತಿಕ ಸ್ಪರ್ಧೆ, ಘೋಷಣಾ ಫಲಕ ರಚನೆ, ಸಂಗೀತ, ನೃತ್ಯ ಮತ್ತು ರಂಗೋಲಿ ಸ್ಪರ್ಧೆಗಳು ನಡೆಯಲಿವೆ.
ದಿನಾಂಕ 20 ರಂದು ಸ್ವ ಉದ್ಯೋಗ ತರಬೇತಿ ಕಾರ್ಯಾಗಾರ, ಗ್ರಾಮೀಣ ಉತ್ಪನ್ನಗಳ ಪ್ರದರ್ಶನ ಮತ್ತು ಸ್ವಸಹಾಯ ಸಂಘಗಳ ಗ್ರಾಮೀಣ ಕುಶಲಕರ್ಮಿಗಳಿಂದ ತಯಾರಿಸಲ್ಪಟ್ಟ ವಸ್ತುಗಳ ಮಾರಾಟ ಮೇಳ ನಡೆಯಲಿದೆ.
ದಿನಾಂಕ 21 ರಂದು 25 ವರ್ಷಗಳನ್ನು ಪೂರೈಸಿದ ನೆನಪಿಗಾಗಿ 250 ಗುಂಪುಗಳ 38 ಸ್ವಾಸಹಾಯ ಸಂಘಗಳ ರಜತ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ 13 ವಲಯಗಳಲ್ಲಿ ಕಾರ್ಯಕ್ರಮ ನಡೆದಿದ್ದು ನವೆಂಬರ್ 30ರಂದು ಕಾರ್ಕಳದ ಗಾಂಧಿ ಮೈದಾನದಲ್ಲಿ ಸದಸ್ಯರಿಗಾಗಿ ಕ್ರೀಡೋತ್ಸವವನ್ನು ನಡೆಸಲಾಗಿತ್ತು.
ಬಂಡವಾಳದ ಲಾಭಾಂಶವನ್ನು ಸದಸ್ಯರಿಗೆ ವಿತರಿಸುತ್ತಿರುವುದರಿಂದ ನವಚೇತನ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘವು ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಸದಸ್ಯರೆಲ್ಲರಿಗೆ ಸಾಕಷ್ಟು ಅಭಿವೃದ್ಧಿ ಆಗಿರುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಜೇಕಬ್ ವರ್ಗೀಸ್ ಪತ್ರಿಕಾಗೋಷ್ಠಿಯಲ್ಲಿ ಹರ್ಷ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ನವ ಚೇತನದ ಅಧ್ಯಕ್ಷೆ ವಸಂತಿ ಶೆಟ್ಟಿ, ನಿರ್ದೇಶಕರುಗಳಾದ ರೂಬಿ ವರ್ಗೀಸ್, ಶ್ರೀಲತಾ, ಜಯಶ್ರೀ ಹಾಜರಿದ್ದರು. ಸಂಚಾಲಕ ಗಣೇಶ ಬಾರ್ದಿಲ ಸ್ವಾಗತಿಸಿ ವಂದಿಸಿದರು.