ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆ ತಾಲೂಕಿನ ಏಕ ಮಾತ್ರ ವಿಶೇಷ ಸಾಮರ್ಥ್ಯದ ಮಕ್ಕಳ ಶಾಲೆ ಸ್ಪೂರ್ತಿ ಭಿನ್ನ ಸಾಮರ್ಥ್ಯದ ಶಾಲೆ ಹಾಗೂ ತರಬೇತಿ ಕೇಂದ್ರದ ಕಲಾ ಸಂಭ್ರಮ 2025 ಜನವರಿ ಮೂರರಂದು ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿ ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿ, ಮಕ್ಕಳ ಉತ್ತಮ ಲಾಲನೆ, ಪಾಲನೆ, ಆರೋಗ್ಯ ಕಾಪಾಡುತ್ತಿರುವ ಈ ಸಂಸ್ಥೆಯ ಕಾರ್ಯ ಬಹಳಷ್ಟು ಮೆಚ್ಚುವಂತದ್ದು. ಭಿನ್ನ ಸಾಮರ್ಥ್ಯದ ಮಕ್ಕಳನ್ನು ಬೆಳೆಸುವ, ಸಂತೈಸಿ ಕಾಪಾಡುವ ಸಂಸ್ಥೆಯ ಕಾರ್ಯವನ್ನು ಮೆಚ್ಚಿಕೊಂಡರು. ಸರಕಾರದಲ್ಲಿ ನೋಂದಣಿ ಮಾಡಿಸಿ ಸಿಗುವ ಅನುದಾನವನ್ನು ಬಳಸಿಕೊಳ್ಳುವಂತೆ ಕೇಳಿಕೊಂಡರು.




ಇದೇ ಸಂದರ್ಭದಲ್ಲಿ 9ನೇ ವರ್ಷಕ್ಕೆ ಪಾದರ್ಪಣಗೈದ ಶಾಲೆ ಹಾಗೂ ಕಲಿಯುತ್ತಿರುವ 91 ಮಕ್ಕಳನ್ನು, ಶಾಲೆಯನ್ನು ವಿವಿಧ ರೀತಿಯಲ್ಲಿ ಸಹಕರಿಸಿ, ಪ್ರೋತ್ಸಾಹಿಸಿದ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅರ್ಜುನ್ ಭಂಡಾರ್ಕರ್, ಭಾಗ್ಯ ಶ್ರೀ ಅವರನ್ನು ಮತ್ತು ಸ್ಪೂರ್ತಿ ರತ್ನ ಪ್ರಶಸ್ತಿಯೊಂದಿಗೆ ಧನಂಜಯ ಮೂಡುಬಿದರೆ ಅವರನ್ನು ಸನ್ಮಾನಿಸಲಾಯಿತು. ಶಾಲೆಯ ಕೀರ್ತಿಯನ್ನು ಹೆಚ್ಚಿಸುತ್ತಿರುವ ಉದ್ಯೋಗಿಗಳನ್ನು, ವಿವಿಧ ಸಂದರ್ಭಗಳಲ್ಲಿ ಸಾಕಷ್ಟು ತರಬೇತಿ ನೀಡಿ ವಿದ್ಯಾರ್ಥಿಗಳನ್ನು ಬೆಳಗಿಸಿದ ಮಹನೀಯರುಗಳನ್ನು ಸನ್ಮಾನಿಸಲಾಯಿತು.
ಬಂದ ಕಷ್ಟವನ್ನು ಸಮರ್ಥವಾಗಿ ಎದುರಿಸಿ ಸಮಾಜದ ಮಂಚೂಣಿಗೆ ತರುತ್ತಿರುವ ಸಂಸ್ಥೆಯ ಕಾರ್ಯಕ್ಕೆ ಎಲ್ಲರೂ ಕೈಜೋಡಿಸುವಂತೆ ಬಿಜೆ ಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಲೀಲಾ ದರ ಶೆಟ್ಟಿಗಾರ, ಸಂಚಾಲಕ ರಾಜೇಶ್ ಸುವರ್ಣ, ಅಬು ಲಾಲ ಪುತ್ತಿಗೆ, ಸಿಎಚ್ ಅಬ್ದುಲ್ ಗಪೂರ್, ಕೃಷ್ಣಾನಂದ, ಪೋಷಕರ ಸಮಿತಿಯ ಲತಾ ಸುರೇಶ್, ಹಾಗೂ ಇತರರು ವೇದಿಕೆಯಲ್ಲಿ ಹಾಜರಿದ್ದರು.
ಶಾಲೆಯ ಸಂಸ್ಥಾಪಕ ಪ್ರಕಾಶ್ ಶೆಟ್ಟಿಗಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯೋಪಾಧ್ಯಾಯನಿ ಶಮಿಲಾ ವರದಿ ವಾಚಿಸಿದರು. ಸುಚಿತ್ರ ಪೂಜಾರಿ ಸನ್ಮಾನಿತರ ಪತ್ರ ವಾಚಿಸಿದರು.