14ನೇ ಬಾರಿ ಫ್ರೆಂಚ್ ಓಪನ್ ಗೆದ್ದ ಸ್ಪೆಯಿನ್‌ನ ರಾಫೆಲ್ ನಡಾಲ್ ಅವರು ಒಟ್ಟು 24 ಗ್ರಾನ್‌ಸ್ಲಾಮ್ ಗೆದ್ದ ಸಾಧನೆ ಮಾಡಿದರು. ಮಹಿಳಾ ಸಿಂಗಲ್ಸ್‌ನಲ್ಲಿ ಪೋಲೆಂಡ್‌ನ ಇಕಾ ಸ್ವಿಟೆಕ್ ಎರಡನೇ ಫ್ರೆಂಚ್ ಓಪನ್ ಮತ್ತು ಗ್ರಾನ್‌ಸ್ಲಾಮ್ ಸಾಧನೆ ಮಾಡಿದರು.
ಪುರುಷ, ಮಹಿಳಾ ಎರಡೂ ಫೈನಲ್‌ಗಳಲ್ಲಿ ವಿಜೇತರು ನೇರ ಸೆಟ್‌ಗಳಲ್ಲಿ ಜಯಗಳಿಸಿದರು. ನಡಾಲ್ ಅವರು ನಾರ್ವೆಯ ಕಾಸ್ಪರ್ ರೂಡ್ ವಿರುದ್ಧ ಗೆದ್ದರು. ಸ್ವಿಟೆಕ್ ಅವರು ಯುಎಸ್‌ಎಯ ಕೋಕೋ ಗಪ್ ವಿರುದ್ಧ ಗೆದ್ದರು. ರನ್ನರ್ ಅಪ್ ಇಬ್ಬರಿಗೂ ಇದು ಮೊದಲ ಗ್ರಾನ್‌ಸ್ಲಾಮ್ ಫೈನಲ್ ಆಗಿತ್ತು. ಕರಿಯ ಆಟಗಾತಿ ಗಪ್ ಇನ್ನೂ ಹದಿಹರೆಯದವರು.