ಮಂಗಳೂರು:- ಸಸಿಹಿತ್ಲು ಆಂಜನೇಯ ದೇವಸ್ಥಾನ ಮತ್ತು ವ್ಯಾಯಾಮ ಶಾಲೆಯವರು ಯವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದಕ್ಷಿಣ ಕನ್ನಡ ಇದರ ಸಹಯೋಗದಲ್ಲಿ ಎರಡು ದಿನಗಳ ನಂದಿನಿ ನದಿ ಹಬ್ಬದ ಉತ್ಸವವನ್ನು ಹಮ್ಮಿಕೊಂಡಿದ್ದಾರೆ.
ರಾಜ್ಯ ಪ್ರವಾಸೋದ್ಯಮ, ಪರಿಸರ ಸಚಿವ ಸಿ. ಪಿ. ಯೋಗೀಶ್ಬರ ನಂದಿನಿ ನದಿ ಉತ್ಸವ ಉದ್ಘಾಟಿಸುವರು. ಧಾರ್ಮಿಕ ದತ್ತಿ ಮಂತ್ರಿ ಕೋಟ ಶ್ರೀನಿವಾಸ ಪೂಜಾರಿ ಆಹಾರೋತ್ಸವ ಉದ್ಘಾಟಿಸುವರು. ಜಿ. ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸುವರು. ಸಚಿವ ಅಂಗಾರ, ಶಾಸಕ ಉಮಾಮಾಥ ಕೋಟ್ಯಾನ್ ಮೊದಲಾದವರು ಉಪಸ್ಥಿತರಿರುವರು. ಇದೇ ವೇಳೆ 500 ದೀಪಗಳನ್ನು ನದಿಗೆ ಬಿಡುವ ಆರತಿ ನಡೆಯಲಿದೆ. ಸಂಜೆ ನೃತ್ಯ ಸ್ಪರ್ಧೆ ನಡೆಯುತ್ತದೆ.
ಮರುದಿನ ದೋಣಿ ಓಟ, ಕಯಾಕಿಂಗ್, ಈಜು, ನೀರಿನ ಇನ್ನಿತರ ಪೈಪೋಟಿಗಳು ಇರುತ್ತವೆ. ಕರಾವಳಿಯ ತಿಂಡಿ ತಿನಿಸು, ಸಂಸ್ಕೃತಿ ಪ್ರದರ್ಶನ ಇರುತ್ತದೆ. ಪತ್ರಿಕಾಗೋಷ್ಠಿಯನ್ನು ನಂದಿನಿ ನದಿ ಉತ್ಸವ ಸಮಿತಿಯ ಅಧ್ಯಕ್ಷರಾದ ವಿನೋದ್ ಕುಮಾರ್ ಸಸಿಹಿತ್ಲು ನಡೆಸಿಕೊಟ್ಟರು. ವಾರ್ತಾ ಇಲಾಖೆಯ ಮಂಜುನಾಥ್, ಅನಿಲ್ ಕುಮಾರ್ ಸಾಲ್ಯಾನ್, ಸಂತೋಷ್ ಕುಮಾರ್, ನಿತಿನ್ ಸುವರ್ಣ ಉಪಸ್ಥಿತರಿದ್ದರು.