ಮಂಗಳೂರು: ಮಣ್ಣಗುಡ್ಡೆ ನಿವಾಸಿ, ಮೆ. ಅಶೋಕ ಇಂಡಸ್ಟ್ರೀಸ್ ಪ್ರವರ್ತಕ ದಾಮೋದರ ನಾಯಕ್ ಕಲ್ಯಾಣಪುರ (92ವ) ಫೆ11ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಇಬ್ಬರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.
ಕೆನರಾ ವಕರ್್ಶಾಪ್ನಲ್ಲಿ 22 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದ ಅವರು ಸೆಂಟ್ರಲ್ ಮಾಕರ್ೆಟ್ ಬಳಿ 1970ರಲ್ಲಿ ಕೃಷಿ ಉಪಕರಣಗಳು , ಬೇರಿಂಗ್ಸ್ ವಿತರಕ ಅಶೋಕ್ ಇಂಡಸ್ಟ್ರೀಸ್ ಸ್ಥಾಪಿಸಿ ಕಳೆದ 5 ದಶಕಗಳಿಂದ ಜನಾನುರಾಗಿ ವರ್ತಕರಾಗಿ ಗುರುತಿಸಿಕೊಂಡಿದ್ದರು. ದ.ಕ ಜಿಲ್ಲಾ ಅಟೋಮೊಬೈಲ್ಸ್ ಆಂಡ್ ಟೈರ್ ಡೀಲರ್ಸ್ ಅಸೋಸಿಯೇಶನ್ ಖಚಾಂಚಿಯಾಗಿ, ಮಂಗಳೂರಿನ ಶ್ರೀ ಶ್ರೀನಿವಾಸ ನಿಗಮಾಗಮ ಪಾಠಶಾಲೆಯ ಗೌರವ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.
ಇಳಿವಯಸ್ಸಿನಲ್ಲೂ ಅಕೌಂಟಿಂಗ್ ನಿರ್ವಹಣೆ, ಮುದ್ದಾದ ಕೈಬರಹದ ಮೂಲಕ ಗಮನ ಸೆಳೆದಿದ್ದ ದಾಮೋದರ ನಾಯಕ್
2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ವಾರದ ಹಿಂದೆ ತಲೆಗೆ ಗಂಭೀರ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದು ಮತದಾನದ ಮುನ್ನಾದಿನ ಪತ್ನಿ ಅಗಲಿದ ಪರಿಸ್ಥಿತಿಯಲ್ಲೂ ಹಿರಿಯ ನಾಗರಿಕರಾಗಿ ಮತಚಲಾಯಿಸಿ ಸುದ್ದಿಯಾಗಿದ್ದರು. ಮನೆಗೆ ಬಂದಿದ್ದ ಪರಿವಾರ, ಬಂಧು ಮಿತ್ರರರನ್ನೂ ಮತಚಲಾಯಿಸುವಂತೆ ವಿನಂತಿಸಿ ಅವರವರ ಊರಿಗೆ ಮರಳಿ ಕಳಿಸುವಲ್ಲಿ ಯಶಸ್ವಿಯಾಗಿದ್ದರು. ಅಭ್ಯಥರ್ಿಯೊಬ್ಬನ ಆಯ್ಕೆಗಿಂತ ನಾಗರಿಕರಾಗಿ ನಮ್ಮ ಹಕ್ಕು ಚಲಾಯಿಸುವ ಕರ್ತವ್ಯ ಮರೆಯಬಾರದು ಎನ್ನುವ ಆಶಯ ಅವರದ್ದಾಗಿತ್ತು. ಕೋವಿಡ್ ಲಾಕ್ಡೌನ್ ಸಂದರ್ಭದಲ್ಲೂ ಅವರು ಸೇವಾಂಜಲಿ ಚ್ಯಾರಿಟೇಬಲ್ ಟ್ರಸ್ಟ್ ಮೂಲಕ ಸಂಕಷ್ಟದಲ್ಲಿರುವವರ ನೆರವಿಗೆ ಸ್ಪಂದಿಸಿದ್ದರು.