ವರದಿ ರಾಯಿ ರಾಜ ಕುಮಾರ
ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಪ್ರಶಾಂತ ಶೆಟ್ಟಿ ಹಾಗೂ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಸುನಂದ ಬಿ ಜೈ ಅವರ ಬೀಳ್ಕೊಡುಗೆ ಸಮಾರಂಭ ನೆಲ್ಲಿಕಾರು ಗ್ರಾಮ ಪಂಚಾಯತ್ ನಲ್ಲಿ ನಡೆಯಿತು. ಪಂಚಾಯತ್ ಅಧ್ಯಕ್ಷ ಉದಯ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಸುಶೀಲ, ಸದಸ್ಯರುಗಳಾದ ಜಯಂತ ಹೆಗ್ಡೆ, ಶಶಿಧರ ಎಂ, ಲಲಿತಾ, ಮೋಹಿನಿ, ಸಾಧು, ಪ್ರತಿಮಾ, ಆಶಾಲತಾ, ಸುನಂದ, ಅನ್ನಿ ಪೂಜಾರಿ, ಚಾರ್ಲ್ಸ್ ಸಾಂತಮೇಯರ್, ದರೆಗುಡ್ಡೆಯ ಮುನಿರಾಜ ಹೆಗ್ಡೆ, ಸಂತೋಷ್ ಪೂಜಾರಿ, ದಾಮೋದರ, ಆಡಳಿತಾಧಿಕಾರಿ ಅನಿಲ್, ರಾಜು, ಲಕ್ಷ್ಮಣ, ಗೀತಾ, ಅಂಗನವಾಡಿಯ ಅರುಣ, ವಿದೇಶ ಪೂಜಾರಿ, ವಿಶ್ವನಾಥ ದೇವಾಡಿಗ, ಕಿರಣ್ ರೈ ಇತರರು ಉಪಸ್ಥಿತರಿದ್ದರು.
ಪ್ರಶಾಂತ್ ಕುಮಾರ್ ಜೈನ್ ಸ್ವಾಗತಿಸಿದರು. ರೇಣುಕಾ ಮತ್ತು ಪ್ರಮೀಳಾ ಕಾರ್ಯಕ್ರಮ ನಿರ್ವಹಿಸಿದರು. ಪ್ರಜ್ಞಾ ವಂದಿಸಿದರು.