ಗುರ್‍ಪುರ್:  ದಿವಂಗತ ಗುರ್‍ಪುರ್ ಶ್ರೀಧರ್ ಭಟ್ ಅವರ ಪತ್ನಿ ಮಂಗಳೂರು ಮುಂಡಾನ್ ಕದ್ರಿ ಕಂಬ್ಲಾ ನಿವಾಸಿ ಗುರ್‍ಪುರ್ ಸಗುಣಾ ಭಟ್ (82) ಅವರು ಬುಧವಾರ ನವೆಂಬರ್ 27, 2019 ರಂದು ಮುಂಜಾನೆ 7.40 ಕ್ಕೆ ತಮ್ಮ ಸ್ವಗ್ರಹದಲ್ಲಿ ನಿಧನರಾದರು. ಮೃತರು ಮಗ ಗೋಕುಲ್ ಭಟ್, ಇಬ್ಬರು ಪುತ್ರಿಯರಾದ ಶೀಲಾ ಪೈ ಮತ್ತು ಜ್ಯೋತಿ ಕಾಮತ್, ಮೊಮ್ಮಕ್ಕಳು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಮಧ್ಯಾಹ್ನ 12.30 ಕ್ಕೆ ಬೋಳೂರು ರುಧ್ರಭೂಮಿಯಲ್ಲಿ ನಡೆಯಿತು.