ಪ್ರಧಾನಿ ಮೋದಿಯವರು ಮತ್ತು ದೆಹಲಿ ಮುಖ್ಯಮಂತ್ರಿ ಕೇಜ್ರೀವಾಲ್ ಅವರುಗಳು ಚುನಾವಣೆ ನಡೆಯುವ ಐದು ರಾಜ್ಯಗಳಲ್ಲಿ ಎಡೆಬಿಡದೆ ಪ್ರಚಾರ ನಡೆಸುತ್ತಿದ್ದು, ಎಲ್ಲೂ ಮಾಸ್ಕ್ ಧರಿಸದಿರುವುದನ್ನು ರಾಜ್ಯ ಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕಾರವಾಗಿ ಪ್ರಶ್ನಿಸಿದ್ದಾರೆ.

ದೇಶದಲ್ಲಿ ಮತ್ತೆ ಕೊರೋನಾ ಸೋಂಕು ತೀವ್ರ ಆಗಿರುವುದರಲ್ಲಿ ಈ ಇಬ್ಬರು ನಾಯಕರ ಮಾಸ್ಕ್ ಇಲ್ಲದ ರಿಯಾಲಿಗಳ ಪಾತ್ರವೂ ಇದೆ ಎಂದು ಖರ್ಗೆ ಚುಚ್ಚಿದರು. ಪ್ರಧಾನಿ ಮೋದಿಯವರಂತೂ ತಮ್ಮ ಸ್ಥಾನ ಗೌರವ ಮರೆತ ಚುನಾವಣಾ ಪ್ರಚಾರದಲ್ಲಿ ತೊಡಗಿರುವುದು ಖಂಡನೀಯ ಎಂದೂ ಖರ್ಗೆ ಹೇಳಿದರು.