ಮಂಗಳೂರು, ಜನವರಿ 01 : ಹೊಸ ವರುಷದ ಶುಭಾಶಯದೊಂದಿಗೆ ಎಲ್ಲ ಬಗೆಯ ಕೋವಿಡ್‌ ತೊಂದರೆ ನಿವಾರಿಸಲು ಸರಕಾರದ ಜೊತೆಗೆ ಸ್ಕೌಟ್ಸ್ ಮತ್ತು ನಾವೆಲ್ಲ ಕೈಜೋಡಿಸುತ್ತೇವೆ ಎಂದು ಸ್ಕೌಟ್ಸ್ ಮುಖ್ಯಸ್ಥ ಹಾಗೂ ರಾಜಕಾರಣಿಯೂ ಆದ ಪಿ. ಜಿ. ಆರ್. ಸಿಂಧ್ಯಾ ಅವರು ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸಂವಾದದಲ್ಲಿ ಪಾಲ್ಗೊಂಡು ಹೇಳಿದರು.

ಪೋವೆಲ್‌ರಿಂದ 1907ರಲ್ಲಿ ಲಂಡನ್‌‌ನಲ್ಲಿ ಆರಂಭವಾದ ಸ್ಕೌಟ್ಸ್ 1913ರಲ್ಲಿ ಮೈಸೂರು ಅರಸರಿಂದ ಬೆಂಗಳೂರಿನ ಬಿಶಪ್ ಕಾಟನ್ ಶಾಲೆಯಲ್ಲಿ ಆರಂಭವಾಯಿತು.

ಮೈಸೂರು ಅರಸರು ಜಾಗ ನೀಡಿರುವುದಲ್ಲದೆ ಇಂದಿಗೂ ಪೋಷಕರಾಗಿರುವರು. ಮಕ್ಕಳ ಮಟ್ಟದಲ್ಲಿ ಬೀ ಹ್ಯಾಪಿ, ಬೀ ಪ್ರಿಪೇರ್ಡ್ ಎಂದು ಅಂತಿಮವಾಗಿ ಸೇವೆ ಎಂಬ ಧ್ಯೇಯದೊಂದಿಗೆ ಸ್ಕೌಟ್ಸ್ ನಡೆಯುತ್ತದೆ ಎಂದು ಸಿಂಧ್ಯಾ ಹೇಳಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ನಾಯಕರಾಗಿ ಏಳು ವರುಷಗಳಿಂದ ಕೆಲಸ ಮಾಡುವ ಸಿಂಧ್ಯಾರನ್ನು ಶ್ರೀನಿವಾಸ ಇಂದಾಜೆ ಸ್ವಾಗತಿಸಿದರು.

ಸ್ಕೌಟ್ಸ್ ನಾಯಕ ಮಧುಸೂದನ್, ಸ್ಕೌಟ್ಸ್ ಸಂಘಟಕ ಪ್ರಭಾಕರ ಭಟ್ ಜೊತೆಗಿದ್ದರು.

ಸ್ಕೌಟ್ಸ್ ಗೈಡ್ಸ್‌ನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಮೊದಲ ಸ್ಥಾನಗಳಲ್ಲಿ ಇರುವುದು ಹೆಮ್ಮೆಯ ವಿಷಯ ಎಂದೂ ಸಿಂಧ್ಯಾ ಹೇಳಿದರು.