ಹೊಸತೊಂದಾಸೆಯ ಹೊತ್ತು

ಶುರುವಾಗಿತ್ತು ಇಪ್ಪತ್ತು ಇಪ್ಪತ್ತು

ಒಂದು ದಶಕವು ಮುಗಿಯಲು

ಒಂದೇ ವರುಷದ ಅಂತರವಿತ್ತು


ನಂಬರ್ ನ ನಂಬಿ ಮೋಸಹೋಗಿ

ಭಾರತ ಜನನ ಪ್ರಮಾಣದಲ್ಲಿ ಮುಂದಿತ್ತು

ಸರ್ವದರಲ್ಲೂ ಮುಂದಿರಬೇಕೆಂಬ

ಚೀನಾದ ಆಸೆಗೆ ನೀರೆರೆಚಿತ್ತು


ಜನವರಿ, ಫೆಬ್ರುವರಿ, ಮಾರ್ಚ್

ಭಾರತದೊಳು ಎಂದಿನಂತಿತ್ತು

ಚೀನಾದ ಕುತಂತ್ರಕ್ಕೆ ನಲುಗಿ

ವಿಶ್ವವೇ ಸ್ಥಬ್ಧತೆಯ ಕಾಣುವಂತಾಯ್ತು


ಕಾಂಚಾನಾಳ ಮೋಹದಲ್ಲಿಹ ಮಂದಿಗೆ

ಕಾಲವೇ ಕಂಡುಕಾಣದ ಪಾಠವ ಕಲಿಸಿತ್ತು

ಇತ್ತ ಗಡಿ ಗಲಾಟೆ, ಅತ್ತ ಕೋವಿಡ್ ಭರಾಟೆ

ಇದ್ರನಡ್ವೆ ಭುವಿ ತನ್ನ ಬಳಿ ಬಂದವರ ಅಪ್ಪಿತ್ತು


- By ಮಾಗಿದ ಮನಸ್ಸು