ಮಂಗಳೂರು:- ಪ್ರಸಕ್ತ ಕಾಲದಲ್ಲಿ ಸಾರ್ವಜನಿಕ ಆರೋಗ್ಯ ಮಾಹಿತಿ ಶಿಬಿರ ಬಹಳಷ್ಟು ಅಗತ್ಯ ಇದೆ.ಕೊರೊನ ಬಂದ ಈ ಸಂದರ್ಭದಲ್ಲಿ ಸರ್ಕಾರ ಪರಿಹಾರ ಒದಗಿಸುವ ಬದಲು ಭೀತಿ ಸೃಷ್ಟಿಸುತ್ತಿದೆ.ಕೊರೊನ ಹೆಸರಿನಲ್ಲಿ ಜನರಲ್ಲಿ ಗೊಂದಲ ಸೃಷ್ಟಿ ಮಾಡುವುದು ಸರಿಯಲ್ಲ.ಈ ಸಮಯದಲ್ಲಿ ಉತ್ತಮ ಸೇವೆ ಸರ್ಕಾರ ನೀಡಲಿ ಎಂದು ಹರಿಕೃಷ್ಣ ಪುನರೂರು ಹೇಳಿದರು

ಅವರು ಅಖಿಲ ಭಾರತ ಬ್ಯಾರಿ ಪರಿಷತ್  ಮಂಗಳೂರು ಹಾಗೂ ವೆಲ್ ನೆಸ್ಸ್ ಹೆಲ್ಫ್ ಲೈನ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಸಹೋದಯ ಸಭಾಂಗಣ ದಲ್ಲಿ ಶುಕ್ರವಾರ  ಜರುಗಿದ ಸಾರ್ವಜನಿಕ  ಆರೋಗ್ಯ ಮಾಹಿತಿ ಶಿಬಿರ ವನ್ನು  ಉದ್ಘಾಟಿಸಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಡಾ.ಹಾರೂನ್ ಮಾತನಾಡಿ, ಕೊರೊನ ಸಮಾಜಕ್ಕೆ ಮಾರಕವಾದ ವೈರಸ್.ಜನಜೀವನ ಮತ್ತು ಆರ್ಥಿಕ ಸ್ಥಿತಿ ಮೇಲೆ ಮಹತ್ತರ ಪರಿಣಾಮ ಕೊರೊನ ಬೀರಿದೆ.ನೆಮ್ಮದಿಯತ್ತ ತಲುಪುವಾಗ ಇದರ ಎರಡನೇ ಅಲೆ ಎದ್ದು ಭೀತಿ ಸೃಷ್ಟಿಸಿದೆ.ಈ ವಿಚಾರ ದಲ್ಲಿ ಅನಗತ್ಯ ಚರ್ಚೆ ಮಾಡಿ ವೈರಲ್ ಮಾಡಿ ಜನರನ್ನು ಸಂಶಯದತ್ತ ದೂಡುವುದು ಬೇಡ.ಮಾಸ್ಕ್ ವೈರಸ್ ನಿಂದ ನಮ್ಮನ್ನು ಮುಕ್ತಗೊಳಿಸುತ್ತದೆ.ಮಾಸ್ಕ್ ನಮಗೆ ಕಡ್ಡಾಯ ಎಂದು ತಿಳಿದು ಕೊಳ್ಳಬೇಕಾಗಿದೆ.ಇದರಿಂದ ಕಾಯಿಲೆ ಹರಡುವುದನ್ನು ತೆಗೆಯಲಾಗುತ್ತದೆ ಎಂದರು.

ಅಹ್ಮದ್ ಖಾಸಿಮ್ ಎಚ್ ಕೆ ಮಾತನಾಡಿ, ಲಾಕ್ ಡೌನ್  ಆದ ಸಂದರ್ಭದಲ್ಲಿ ಮನೆಯಲ್ಲಿ ಈವರೆಗೆ ಉಳಕೊಳ್ಳದವರು ಅನಿವಾರ್ಯ ದೃಷ್ಟಿಯಿಂದ ಉಳಿದುಕೊಂಡರು.ಆರೋಗ್ಯದಲ್ಲಿ ಏರುಪೇರು ಸಾಮಾನ್ಯ.ಈ ಸಂದರ್ಭದಲ್ಲಿ ಚಿಕಿತ್ಸೆ ಮಾಡಬೇಕು.ಕಷ್ಟದಲ್ಲಿರುವ ಜನರಿಗೆ ವ್ಯವಸ್ಥೆ ಮಾಡಿಕೊಡುವುದು ನಮ್ಮ ಕರ್ತವ್ಯ   ಎಂದರು.

ಅ.ಭಾ.ಬ್ಯಾ.ಪ. ಸ್ಥಾಪಕಾಧ್ಯಕ್ಷ ಜೆ.ಹುಸೈನ್, ಗೌರವ ಅಧ್ಯಕ್ಷ ಯೂಸುಫ್ ವಕ್ತಾರ್, ಅಧ್ಯಕ್ಷ ಅಬೂಬಕ್ಕರ್ ಪಲ್ಲಮಜಲ್, ಪ್ರ.ಕಾರ್ಯದರ್ಶಿ ಅಬ್ದುಲ್ ಅಝೀಝ್ ಹಕ್,  ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಗೌರವ ಸಲಹೆಗಾರ ಕಾರ್ಪೋರೇಟರ್ ಅಬ್ದುಲ್ ರವೂಫ್, ಝಿಯಾ  ಮೊದಲಾದವರು ಉಪಸ್ಥಿತರಿದ್ದರು. ಅಬ್ದುಲ್ ಅಝೀಝ್ ಹಕ್ ಸ್ವಾಗತಿಸಿದರು.ನಿಸಾರ್ ಫಕೀರ್ ಮುಹಮ್ಮದ್ ವಂದಿಸಿದರು.