ಕಾರ್ಕಳ ಅತ್ತೂರು ಪ್ರಾಥಮಿಕ ಶಾಲೆಯಲ್ಲಿ 35 ವರ್ಷಕ್ಕೂ ಹೆಚ್ಚು ಕಾಲ ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳ ಪಾಲಿಗೆ ಆದರ್ಶ ಶಿಕ್ಷಕರಾಗಿದ್ದ ಶ್ರೀ ವಿಕ್ಟರ್ ಎಂ. ಪಿರೇರಾ ಅವರು ದಿನಾಂಕ : 19-02-2022 ರಂದು ನಿಧನ ಹೊಂದಿದರು. ಇವರು ಪತ್ನಿ ವೆರೋನಿಕಾ ಕ್ಯಾಸ್ತಲಿನೊ, 4 ಹೆಣ್ಣು ಮಕ್ಕಳು, 1 ಗಂಡು ಮಗನನ್ನು ಅಗಲಿರುತ್ತಾರೆ. ಪಿರೇರಾ ಅವರು ಒರ್ವ ಅದ್ಭುತ ನಾಟಕಕಾರರು, ಅತ್ತೂರು ಇಗರ್ಜಿಯ ವಾಡೆಯ ಗುರಿಕಾರ್, ಪಾಲನಾ ಮಂಡಳಿಯ ಉಪಾಧ್ಯಕ್ಷರಾಗಿಯೂ, ಕಥೊಲಿಕ್ ಸಭಾ ಮಂಗ್ಳೂರು ಪ್ರದೇಶ್(ರಿ) ಇದರ ವಲಯ ಅಧ್ಯಕ್ಷರಾಗಿ ಸೇವೆ ನೀಡಿರುತ್ತಾರೆ. ಸ್ಥಳೀಯ ಮಟ್ಟದಲ್ಲಿ ಬಹಳಷ್ಟು ಜನರಿಗೆ ವೈಯುಕ್ತಿಕ, ಕೌಟುಂಬಿಕ ಸಮಸ್ಯೆಗಳಿಗೆ ಸ್ಪಂದಿಸಿ ಅವುಗಳ ನಿವಾರಣೆಗಾಗಿ ಶ್ರಮಿಸಿ ಜನಾನುರಾಗಿಯಾಗಿದ್ದÀರು. ಕರ್ತವ್ಯವೇ ದೇವರೆಂದು ಭಾವಿಸಿ ಕೆಲಸ ಮಾಡುತ್ತಿದ್ದ ವಿಕ್ಟರ್ ಅವರು ಬಹಳಷ್ಟು ಸೌಮ್ಯ ಸ್ವಭಾವದವರು, ಕುಂದಾಪುರ ತಾಲೂಕಿನ ಬೆಳ್ವೆ ಗೊಮ್ಮಲದಲ್ಲಿ ಬಹಳಷ್ಟು ವರ್ಷಗಳ ಹಿಂದೆ ಶಾಲೆಯೊಂದನ್ನು ಸ್ಥಾಪಿಸಲು ಕಾರಣ ಕರ್ತರು. ಹತ್ತು ವರ್ಷಗಳ ಕಾಲ ಅಲ್ಲಿ ಸೇವೆ ಸಲ್ಲಿಸಿ ಕಾರ್ಕಳದ ಅತ್ತೂರಿಗೆ ಬಂದು ಒಬ್ಬ ಉತ್ತಮ ಶಿಕ್ಷಕನಾಗಿ, ಪೋಷಕನಾಗಿ, ಸಮಾಜ ಸೇವಕನಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ವಿಕ್ಟರ್ ಎಂ. ಪಿರೇರಾ ಅವರ ನಿಧನಕ್ಕೆ ಅವರ ಅಪಾರ ಶಿಷ್ಯವೃಂದ, ಅಭಿಮಾನಿ ವೃಂದ ಕಂಬನಿ ಮಿಡಿದಿದೆ.