ಮಡಂತ್ಯಾರ್: ಸೇಕ್ರೆಡ್ ಹಾರ್ಟ್ ಪದವಿಪೂರ್ವ ಪ್ರೌಢಶಾಲೆ ಹಾಗೂ ಕಾಲೇಜಿಗೆ  40 ವರ್ಷದ ತುಂಬಿದ  ಪ್ರಯುಕ್ತ ಮಾಣಿಕ್ಯೋತ್ಸವ ಸಂಭ್ರಮ ಕಾರ್ಯಕ್ರಮವು ಡಿಸೆಂಬರ್ 1 ರಂದು ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಸಭಾಭವನದಲ್ಲಿ ಜರುಗಿತು.

ಮಂಗಳೂರು ಧರ್ಮ ಪ್ರಾಂತ್ಯದ ವಿಗರ್ ಜನರಲ್ ವಂ| ಮೊನ್ಸಿಂಜರ್ ಮ್ಯಾಕ್ಸಿಮ್ ಎಲ್ ನರೊನ್ಹಾ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಥೋಲಿಕ್ ಶಿಕ್ಷಣ ಮಂಡಳಿಯಿಂದ ನಡೆಸಲ್ಪಡುವ ವಿದ್ಯಾಸಂಸ್ಥೆಗಳು ಮೌಲ್ಯಧಾರಿತ ಶಿಕ್ಷಣವನ್ನು ನೀಡುತ್ತಿದೆ. ವಿದ್ಯಾಸಂಸ್ಥೆಗಳು ನಿರಂತರ ಪ್ರವಹಿಸುವ ನದಿ ಇದ್ದಂತೆ.ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಮಹತ್ತರ ಜವಾಬ್ದಾರಿಯನ್ನು ಹೊತ್ತಿರುವ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆ  ಉತ್ತರೋತ್ತರ ಅಭಿವೃದ್ದಿಯನ್ನು ಕಾಣುವಂತಾಗಲೆಂದು ಅವರು ಶುಭ ಹಾರೈಸಿದರು.      

ಮಂಗಳೂರು ಕೆಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಂ|ಆಂಟನಿ ಎಂ. ಸೆರಾ, ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರಾದ ವಂ| ದೀಪಕ್ ಡೇಸಾ, ಪೂಂಜಲ್ ಕಟ್ಟೆ ಕ್ಲಸ್ಟರ್ ನ ಸಿ. ಆರ್. ಪಿ ಚೇತನ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು .ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಇಲಾಖೆ ಅಪಾರ ನಿರ್ದೇಶಕ ಅರುಣ್ ಪುಟಾರ್ಡೊ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು. 

ನಿವೃತ್ತ ಪ್ರಾಂಶುಪಾಲರುಗಳಾದ  ವಂ| ಲಾರೆನ್ಸ್ ರೊಡ್ರಿಗಸ್, ಬ್ಯಾಪ್ಟಿಸ್ಟ್ ಮಿರಾಂದ , ಮ್ಯಾಥ್ಯೂ ಎನ್.ಎಮ್  ವಿಶೇಷ ಆಹ್ವಾನಿತರಾಗಿದ್ದರು ಸೇಕ್ರೆಡ್ ಹಾರ್ಟ್ ಪ್ರೌಢ ಶಾಲಾ ಹಾಗೂ ಕಾಲೇಜು ವಿಭಾಗದ ಶಿಕ್ಷಕರಕ್ಷಕ ಸಂಘದ ಉಪಾಧ್ಯಕ್ಷರಾದ ವಿಶ್ವನಾಥ ಪೂಜಾರಿ ,ಕುಮಾರ ನಾಯ್ಕ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮ್ಯಾಕ್ಸಿನ್ ಆಲ್ಬುಕರ್ಕ್, ಕಾಲೇಜು ಹಾಗೂ ಪ್ರೌಢಶಾಲಾ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರನೀಲ್ ಮಸ್ಕರೇನ್ಹಸ್, ಭವಿಷ್ಯ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ವಂ| ಬೇಸಿಲ್ ವಾಸ್ ಸ್ವಾಗತಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಜೆರೊಮ್ ಡಿಸೋಜ ವಾರ್ಷಿಕ ವರದಿ ವಾಚಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಮೋಹನ್ ನಾಯಕ್ ಸಂಸ್ಥಾಪಕರಾದ ದಿ. ವಂ| ಲಿಗೋರಿ ಡಿಸೋಜ ರವರಿಗೆ ನುಡಿನಮನ ಸಲ್ಲಿಸಿದರು .ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲರುಗಳನ್ನು ಸನ್ಮಾನಿಸಲಾಯಿತು. 40ನೇ ವಾರ್ಷಿಕೋತ್ಸವದ ಸುಸಂದರ್ಭದಲ್ಲಿ ಹೊರ ತರುತ್ತಿರುವ ಕಾಲೇಜು ಸ್ಮರಣ ಸಂಚಿಕೆ ವಿಷನ್ ನನ್ನು ಬಿಡುಗಡೆಗೊಳಿಸಲಾಯಿತು. ಶಿಕ್ಷಕರಾದ ಗ್ರೇಸ್ ಲೀನಾ  ವಂದಿಸಿ, ಹೇಮಲತಾ. ಎಂ,ಶಾಂತಿ ಮೇರಿ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.