ಮುಂಬಯಿ: ಶಾಲಿನಿ ಎಚ್.ಶೆಟ್ಟಿ ಮತ್ತು ಪ್ರಿಯದರ್ಶಿನಿ ಸುರತ್ಕಲ್ ಇವರು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ನವದುರ್ಗಾ ಲೇಖನ ಯಜ್ಞದ ಅಂಗವಾಗಿ ಕಳೆದ ಶನಿವಾರ (ಡಿ. 14) ರಂದು 9 ಶಿಲಾಸೇವೆಯನ್ನು ನೀಡಿ, ಶಿಲಾಪುಷ್ಪ ಸಮರ್ಪಿಸಿ ಕಾಪುವಿನ ಅಮ್ಮನ ಮಕ್ಕಳು ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಅವರಿಗೂ ಅವರ ಕುಟುಂಬ ಸಂಸಾರಕ್ಕೂ ಶ್ರೀದೇವಿಯು ಸಂಪೂರ್ಣ ಅನುಗ್ರಹವನ್ನು ಕರುಣಿಸಲಿ. ಆಯುರಾರೋಗ್ಯ ಭಾಗ್ಯವನ್ನೂ, ಸಕಲ ಸಿರಿ ಸಂಪದವನ್ನು ಶ್ರೀ ಮಾರಿಯಮ್ಮ ದಯಪಾಲಿಸಲಿ ಎಂದು ದೇವಿಯ ಪದತಲದಲ್ಲಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಶುಭಾರೈಸಿದರು.