ಆಂಧ್ರ, ಬಿಹಾರ ರಾಜ್ಯಗಳು ಕಾನೂನಿಗಿಂತ ಮೇಲಲ್ಲ. ಯಾವುದೇ ರಾಜ್ಯವು ಕೋವಿಡ್‌ ಪರಿಹಾರ ನೀಡಲು ವಿಫಲವಾದರೆ ಕಠಿಣ ಕ್ರಮ ಎದುರಿಸಲು ಸಿದ್ಧರಿರಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಎಂ. ಆರ್. ಶಾ ಈ ಸಂಬಂಧದ‌ ಪ್ರಕರಣ ವಿಚಾರಣೆ ಮಾಡುತ್ತ ಹೇಳಿದರು.

ಆಂಧ್ರ ಸರಕಾರವು ಕೋವಿಡ್‌ ಪರಿಹಾರ ಕೋರಿ 36,000 ಅರ್ಜಿಗಳು ಬಂದಿರುವುದಾಗಿಯೂ, ಅವುಗಳಲ್ಲಿ 31,000 ಅರ್ಹ ಅರ್ಜಿಗಳು ಎಂದು ಹಿಂದೆ ಕೋರ್ಟಿಗೆ ತಿಳಿಸಿತ್ತು.‌ ಆದರೆ ಇಷ್ಟು ಕಾಲವಾದರೂ 11,000 ಅರ್ಜಿಗಳಿಗೆ ಮಾತ್ರ ಪರಿಹಾರ ನೀಡಲಾಗಿದೆ. ಇನ್ನೂ ತಡ ಮಾಡುವಂತಿಲ್ಲ ಎಂದು ನ್ಯಾಯಾಧೀಶರು ಎಚ್ಚರಿಸಿದರು.