ಸುರತ್ಕಲ್: ರೈತರು ಆರ್ಥಿಕತೆಯ ಬೆನ್ನೆಲುಬು ಆಗಿದ್ದು ದೇಶದ ಆರ್ಥಿಕತೆಗೆ ರೈತರ ಪಾತ್ರ ಮಹತ್ವದ್ದಾಗಿದೆ ಎಂದು ಬಂಟರ ಸಂಘದ ನಿರ್ದೇಶಕ ಹಾಗೂ ಪರಿಸರ ಪ್ರೇಮಿ ಸುರತ್ಕಲ್ ಸದಾಶಿವ ಶೆಟ್ಟಿ ಹೇಳಿದರು.ಅವರು ಬಿಲ್ಲವ ಸಂಘ ತಾಳಿಪಾಡಿ ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನ ತಾಳಿಪಾಡಿ ಮಠ ಇವರ ಸಹಯೋಗದೊಂದಿಗೆ ಸ್ಥಳೀಯರಿಗೆ ವಿವಿಧ ತಳಿಯ ಗಿಡಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ರೈತರು ಕೈಗಾರಿಕೆಗಳಿಗೆ ಆಹಾರ ಮೇವು ಹಾಗೂ ಇತರ ಕಚ್ಚಾ ವಸ್ತುಗಳನ್ನು ಒದಗಿಸುವ ಮೂಲಕ ದೇಶವನ್ನು ಸುಭದ್ರಗೊಳಿಸುವುದು ಮಾತ್ರವಲ್ಲದೆ ಭಾರತೀಯ ಜನಸಂಖ್ಯೆಯ ಬಹುಪಾಲು ಜೀವನೋಪಾಯದ ಮೂಲಕವಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.ಸರಕಾರ ರೈತರನ್ನು ಬೆಳೆಸುವುದರ ಜೊತೆಗೆ ಸಮಾಜದಲ್ಲಿ ಗುರುತಿಸಿದಾಗ ದೇಶವು ಇನ್ನಷ್ಟು ಅಭಿವೃದ್ಧಿಯ ಪಥಕ್ಕೆ ಏರಲು ಸಾಧ್ಯ ಎಂದರು.
ಇದೇ ವೇಳೆ ಸ್ಥಳೀಯರಿಗೆ ಸುಮಾರು 1ಸಾವಿರದ ನೂರ ಐವತ್ತು ವಿವಿಧ ತಳಿಯ ಗಿಡಗಳನ್ನು ವಿತರಿಸಲಾಯಿತು.
ಈ ಸಂದರ್ಭ ವೇದಿಕೆಯಲ್ಲಿ ತಾಳಿಪಾಡಿ ಬಿಲ್ಲವ ಸಂಘದ ಕಾರ್ಯದರ್ಶಿ ಹರೀಶ್ ಸಾಲ್ಯಾನ್ ತೇರೆ ಗುರಿ. ದಯಾನಂದ ಭಟ್.ನಿವೃತ್ತ ಕೃಷಿ ಅಧಿಕಾರಿ ಅಬ್ದುಲ್ ಬಶೀರ್ .ಕಿನ್ನಿಗೋಳಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಸುಜಾತಾ ಪೂಜಾರಿ ಅರುಣ್ ಕುಮಾರ್ ದಯಾನಂದ ಭಟ್ ಮೊದಲಾದವರು ಉಪಸ್ಥಿತರಿದ್ದರು